×
Ad

ಪ್ರಧಾನಿ, ವಿತ್ತಸಚಿವರನ್ನು ಹೊರತುಪಡಿಸಿ, ಉಳಿದೆಲ್ಲರಿಗೂ ಭಾರತ ಜೀವವಿಲ್ಲದ ಆರ್ಥಿಕತೆ ಎಂಬುದು ತಿಳಿದಿದೆ: ರಾಹುಲ್ ಗಾಂಧಿ ವ್ಯಂಗ್ಯ

Update: 2025-07-31 20:18 IST

ರಾಹುಲ್ ಗಾಂಧಿ | PC :  PTI 

ಹೊಸದಿಲ್ಲಿ: ಗುರುವಾರ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ನರೇಂದ್ರ ಮೋದಿಯವರ ಆಡಳಿತದಲ್ಲಿ ಭಾರತದ ಆರ್ಥಿಕತೆಗೆ ಜೀವವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಸಂಸತ್ ಭವನ ಸಂಕೀರ್ಣದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಹೊರತುಪಡಿಸಿ, ಉಳಿದೆಲ್ಲರಿಗೂ ಭಾರತದ ಆರ್ಥಿಕತೆಗೆ ಜೀವವಿಲ್ಲ ಎಂಬುದು ತಿಳಿದಿದೆ” ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಭಾರತದ ಆರ್ಥಿಕತೆ, ರಕ್ಷಣೆ ಹಾಗೂ ವಿದೇಶಾಂಗ ನೀತಿಗಳನ್ನು ನಾಶಗೊಳಿಸಿದೆ ಎಂದು ಅವರು ಆರೋಪಿಸಿದರು.

“ಭಾರತ ಮತ್ತು ರಶ್ಯ ಜೀವವಿಲ್ಲದ ಆರ್ಥಿಕತೆಗಳು” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೂದಲಿಸಿರುವ ಹಿನ್ನೆಲೆಯಲ್ಲಿ, ರಾಹುಲ್ ಗಾಂಧಿ ಮೇಲಿನಂತೆ ಹೇಳಿಕೆ ನೀಡಿದ್ದಾರೆ.

“ಟ್ರಂಪ್ ಅವರು ವಾಸ್ತವವನ್ನು ಹೇಳುತ್ತಿದ್ದಾರೆ. ಸರಕಾರವು ಕೋಟ್ಯಧಿಪತಿ ಉದ್ಯಮಿ ಗೌತಮ್ ಅದಾನಿಗೆ ಲಾಭ ಮಾಡಿಕೊಡಲು ಭಾರತದ ಆರ್ಥಿಕತೆ ತೆವಳುವಂತೆ ಮಾಡಿದೆ” ಎಂದೂ ಅವರು ದೂರಿದರು.

“ಅವರು ಒಬ್ಬರು ಅಥವಾ ಇಬ್ಬರು ಉದ್ಯಮಪತಿಗಳಿಗೆ ಲಾಭ ಮಾಡಿಕೊಡಲು ದೇಶದ ಆರ್ಥಿಕತೆಗೆ ಹಾನಿಯುಂಟು ಮಾಡಿದ್ದಾರೆ” ಎಂದೂ ಅವರು ಆಪಾದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News