ನ್ಯೂಝಿಲ್ಯಾಂಡ್: ಅತ್ಯಾಚಾರ ಆರೋಪಿ ಭಾರತೀಯ ಮೂಲದ ಚಾಲಕನಿಗೆ ಜೈಲು
Update: 2025-12-15 23:21 IST
photo: indiatoday
ವೆಲ್ಲಿಂಗ್ಟನ್, ಡಿ.7: ನ್ಯೂಝಿಲ್ಯಾಂಡ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಭಾರತೀಯ ಮೂಲದ ಉಬೆರ್ ಚಾಲಕ ಸತ್ವಿಂದರ್ ಸಿಂಗ್ ಗೆ 7 ವರ್ಷ ಎರಡು ತಿಂಗಳು ಜೈಲುಶಿಕ್ಷೆ ವಿಧಿಸಲಾಗಿದೆ.
2023ರಲ್ಲಿ ಡ್ಯುನೆಡಿನ್ ನ ಸ್ಪೆಯ್ಟ್ಸ್ ಏಲ್ ಹೌಸ್ ನಿಂದ ಪೂರ್ವ ಹ್ಯಾಮಿಲ್ಟನ್ ಗೆ ತಡರಾತ್ರಿ ಉಬರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯ ಮೇಲೆ ಚಾಲಕ ಸತ್ವಿಂದರ್ ಸಿಂಗ್ ಅತ್ಯಾಚಾರ ಎಸಗಿರುವುದು ಸಾಬೀತಾಗಿದೆ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಉಲ್ಲೇಖಿಸಿದ್ದು ಸತ್ವಿಂದರ್ ಸಿಂಗ್ ಗೆ ವಿಧಿಸಿರುವ ಶಿಕ್ಷೆಯ ಪ್ರಮಾಣವನ್ನು ಇಳಿಸಬೇಕೆಂಬ ಕೋರಿಕೆಯನ್ನು ತಳ್ಳಿಹಾಕಿದ್ದಾರೆ.