×
Ad

Malappuram | ‘ಮಹಿಳೆಯರು ಗಂಡಂದಿರ ಜೊತೆ ಮಲಗಲು ಮಾತ್ರ’; ಚುನಾವಣೆ ಗೆದ್ದ ಬಳಿಕ CPM ನಾಯಕನ ಸ್ತ್ರೀದ್ವೇಷ ಭಾಷಣ!

Update: 2025-12-16 00:17 IST

credit: x/@IndiaToday

ಕೊಚ್ಚಿ: ಕೇರಳದ ಮಲಪ್ಪುರಂ ಜಿಲ್ಲೆಯ ತೆನ್ನೆಲಾ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ 47 ಮತಗಳ ಅಂತರದಿಂದ ಜಯ ಸಾಧಿಸಿದ ಸಿಪಿಎಂ ನಾಯಕ ಸಯೀದ್ ಅಲಿ ಮಜೀದ್ ಅವರ ವಿಜಯೋತ್ಸವ ಭಾಷಣ ಸ್ತ್ರೀದ್ವೇಷದ ಹೇಳಿಕೆಗಳ ಹಿನ್ನೆಲೆಯಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ.

ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಸಯೀದ್ ಅಲಿ ಮಜೀದ್, ಮದುವೆಯಾಗಿ ಪಂಚಾಯತ್ ವ್ಯಾಪ್ತಿಗೆ ಬಂದ ಮಹಿಳೆಯರು ಮತಗಳಿಗಾಗಿ ಅಥವಾ ಚುನಾವಣೆಗಾಗಿ ಬರಬಾರದು. ಅವರು ತಮ್ಮ ಗಂಡಂದಿರ ಜೊತೆ ಮಲಗಲು ಮಾತ್ರ ಎಂದು ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

ಇಂಡಿಯನ್ ಮುಸ್ಲಿಂ ಲೀಗ್ ನ ಮಹಿಳಾ ಲೀಗ್‌ ವಿಭಾಗದ ಅಧ್ಯಕ್ಷರು ಒಂದು ದಿನ ತಡವಾಗಿ ವೀಡಿಯೊ ಬಿಡುಗಡೆ ಮಾಡಿರುವುದನ್ನು ಉಲ್ಲೇಖಿಸಿ, ಮಹಿಳಾ ಲೀಗ್ ಬಗ್ಗೆ ಮಾತನಾಡುವ ಅಗತ್ಯವಿಲ್ಲ ಎಂದು ಹೇಳಲಾಗಿದೆ ಎಂದು ಮಜೀದ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

“ರಾಜಕೀಯದಲ್ಲಿದ್ದರೆ ಪಾಣಕ್ಕಾಡ್‌ನ ತಂಙಳ್ ಕುರಿತೂ ಮಾತು ಬರುತ್ತದೆ. ಅದನ್ನು ಕೇಳುವ ಧೈರ್ಯವಿರುವವರು ಮಾತ್ರ ರಾಜಕೀಯಕ್ಕೆ ಬರಬೇಕು. ಇಲ್ಲದಿದ್ದರೆ ಗೃಹಿಣಿಯರಾಗಿ ಮನೆಯಲ್ಲೇ ಇರಬಹುದು” ಎಂದು ಅವರು ಹೇಳಿರುವುದು ವೀಡಿಯೊದಲ್ಲಿ ಕೇಳಿಬರುತ್ತದೆ.

ವರದಿಗಳ ಪ್ರಕಾರ, ಸಯೀದ್ ಅಲಿ ಮಜೀದ್ ಅವರು ಸಿಪಿಎಂನ ಸ್ಥಳೀಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅವರು ವಾರ್ಡ್‌ನಲ್ಲಿ 666 ಮತಗಳನ್ನು ಪಡೆದು, ಇಂಡಿಯನ್ ಮುಸ್ಲಿಂ ಲೀಗ್ ಅಭ್ಯರ್ಥಿಗಿಂತ 47 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಈ ಹೇಳಿಕೆಗಳನ್ನು ಮಹಿಳೆಯರ ಗೌರವಕ್ಕೆ ಧಕ್ಕೆ ತರುವುದಾಗಿ ಮಹಿಳಾ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳು ಖಂಡಿಸಿದ್ದು, ಸಯೀದ್ ಅಲಿ ಮಜೀದ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿವೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News