×
Ad

ಖ್ಯಾತ ಜಾವೆಲಿನ್ ಪಟು ನೀರಜ್ ಚೋಪ್ರಾ ವಿವಾಹ

Update: 2025-01-20 08:40 IST

PC: x.com/toisports

ಹೊಸದಿಲ್ಲಿ: ಎರಡು ಒಲಿಂಪಿಕ್ ಪದಕಗಳನ್ನು ದೇಶಕ್ಕೆ ಗೆದ್ದುಕೊಟ್ಟ ಹೆಗ್ಗಳಿಕೆಯ ಖ್ಯಾತ ಜಾವೆಲಿನ್ ಪಟು ನೀರಜ್‌ ಚೋಪ್ರಾ ವಿವಾಹ ಬಂಧನಕ್ಕೆ ಒಳಪಟ್ಟಿದ್ದಾರೆ. ಹೃದಯಸ್ಪರ್ಶಿ ಟಿಪ್ಪಣಿಯೊಂದಿಗೆ ಇನ್ಸ್ಟಾಗ್ರಾಂನಲ್ಲಿ ಈ ಖುಷಿಯನ್ನು ಚೋಪ್ರಾ ಅಭಿಮಾನಿಗಳ ಜತೆ ಹಂಚಿಕೊಂಡಿದ್ದಾರೆ. "ನನ್ನ ಜೀವನದಲ್ಲಿ ಕುಟುಂಬದೊಂದಿಗೆ ಹೊಸ ಅಧ್ಯಾಯ ಆರಂಭಿಸುತ್ತಿದ್ದೇನೆ. ಜತೆಯಾಗಿರುವ ಈ ಕ್ಷಣದಲ್ಲಿ ಶುಭ ಹಾರೈಸಿದ ಎಲ್ಲರಿಗೂ ಕೃತಜ್ಞತೆಗಳು." ಎಂದಿದ್ದಾರೆ.

ವಿವಾಹ ಸಮಾರಂಭದ ಹಲವು ಚಿತ್ರಗಳನ್ನು ಹಂಚಿಕೊಂಡಿರುವ ನೀರಜ್‌ ಚೋಪ್ರಾ ಅವರು, ಪತ್ನಿ ಹಿಮಾನಿ ಅಮೆರಿಕದಲ್ಲಿ ಅಧ್ಯಯನ ಮಾಡುತ್ತಿರುವ ಅಂಶವನ್ನು ಬಹಿರಂಗಪಡಿಸಿದ್ದಾರೆ. ನಿಕಟ ಸಂಬಂಧಿಕರು ಮತ್ತು ಕುಟುಂಬ ಸಂಬಂಧಿಕರ ಸಮ್ಮುಖದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ನೀರಜ್‌- ಹಿಮಾನಿ ವಿವಾಹವಾದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News