×
Ad

ಬಾಲಕಿಯ ಮೇಲೆ ಹಲ್ಲೆ ನಡೆಸಿ, ಗುಪ್ತಾಂಗಕ್ಕೆ ಗಾಯಗೊಳಿಸಿದ ಶಿಕ್ಷಕಿ; ಪೋಕ್ಸೊ ಪ್ರಕರಣ ದಾಖಲು

Update: 2025-04-19 20:14 IST

ಸಾಂದರ್ಭಿಕ ಚಿತ್ರ | PC : freepik.com

 

ರಾಜ್ ಕೋಟ್: 4 ವರ್ಷದ ಶಾಲಾ ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿರುವ ಶಿಕ್ಷಕಿಯೊಬ್ಬರು, ಆಕೆಯ ಗುಪ್ತಾಂಗವನ್ನು ಗಾಯಗೊಳಿಸಿರುವ ಘಟನೆ ಗುಜರಾತ್ ನ ರಾಜ್ ಕೋಟ್ ನಗರದಲ್ಲಿ ನಡೆದಿದೆ. ಈ ಸಂಬಂಧ, ಆರೋಪಿ ಶಿಕ್ಷಕಿಯ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಶನಿವಾರ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ತನ್ನ ಗುಪ್ತಾಂಗದಲ್ಲಿ ನೋವಾಗುತ್ತಿದೆ ಎಂದು ಸಂತ್ರಸ್ತ ಬಾಲಕಿಯು ತನ್ನ ತಾಯಿಗೆ ತಿಳಿಸಿದ್ದು, ಆಕೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ, ಆಕೆಯ ಗುಪ್ತಾಂಗಕ್ಕೆ ಗಾಯವಾಗಿ, ಸೋಂಕು ತಗುಲಿರುವುದು ಬೆಳಕಿಗೆ ಬಂದಿತು ಎಂದು ಅವರು ಹೇಳಿದರು.

ಈ ಸಂಬಂಧ, ಎಪ್ರಿಲ್ 11-12ರಂದು ಬಾಲಕಿಯ ತಾಯಿ ನೀಡಿದ ದೂರನ್ನು ಆಧರಿಸಿ, ಖಾಸಗಿ ಶಾಲೆಯೊಂದರ 42 ವರ್ಷದ ಶಿಕ್ಷಕಿಯೊಬ್ಬರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ರಾಜ್ ಕೋಟ್ ನ ಉಪ ಪೊಲೀಸ್ ಆಯುಕ್ತ ಜಗದೀಶ್ ಬಂಗರ್ವ, “ಶಿಕ್ಷಕಿಯು ನನ್ನನ್ನು ಥಳಿಸಿದರು ಎಂದು ನನ್ನ ಪುತ್ರಿ ನನಗೆ ತಿಳಿಸಿದಳು ಎಂದು ಆಕೆಯ ತಾಯಿ ಹೇಳಿದ್ದಾರೆ. ಬಾಲಕಿಯು ನಡೆದ ಘಟನೆಯನ್ನು ಸೂಕ್ತವಾಗಿ ವಿವರಿಸಲು ಅಸಮರ್ಥವಾಗಿದ್ದು, ಆಕೆಗೆ ಆಪ್ತ ಸಮಾಲೋಚನೆಯ ಅವಶ್ಯಕತೆ ಇದೆ. ಶಿಕ್ಷಕಿಯೇನಾದರೂ ತನ್ನ ಗುಪ್ತಾಂಗಕ್ಕೆ ಪೆನ್ ನಿಂದ ಗಾಯಗೊಳಿಸಿದರೆ ಅಥವಾ ತನ್ನನ್ನು ಕೈನಿಂದ ಥಳಿಸಿದರೆ ಎಂಬುದನ್ನು ನಿರ್ದಿಷ್ಟವಾಗಿ ಹೇಳಲು ಬಾಲಕಿಗೆ ಸಾಧ್ಯವಾಗುತ್ತಿಲ್ಲ” ಎಂದು ಹೇಳಿದರು.

“ಈ ಕುರಿತು ಶಾಲೆಯಲ್ಲಿ ವಿಚಾರಿಸಿದಾಗ, ತಮ್ಮ ಪುತ್ರಿಯನ್ನು ತಮ್ಮ ಕೊಠಡಿಗೆ ಕರೆದೊಯ್ದಿದ್ದ ಪ್ರಾಂಶುಪಾಲರು, ಆಕೆಯನ್ನು ಥಳಿಸಿದ್ದರು ಎಂಬ ಸಂಗತಿ ತಿಳಿದು ಬಂದಿತು ಎಂದು ಬಾಲಕಿಯ ತಾಯಿ ತಿಳಿಸಿದ್ದಾರೆ” ಎಂದೂ ಅವರು ತಿಳಿಸಿದರು.

ಆದರೆ, ಈ ಆರೋಪಗಳನ್ನು ಆರೋಪಿ ಶಿಕ್ಷಕಿ ಅಲ್ಲಗಳೆದಿದ್ದು, ಎಪ್ರಿಲ್ 11ರಂದು ತರಗತಿಯ ಕೊಠಡಿಯಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಪ್ರತಿಪಾದಿಸಲು ಶಾಲಾ ಆಡಳಿತ ಮಂಡಳಿಯು ಅಂದಿನ ತರಗತಿ ಕೋಣೆಯ ಸಿಸಿಟಿವಿ ದೃಶ್ಯಾವಳಿಯನ್ನು ಬಿಡುಗಡೆ ಮಾಡಿದೆ.

ಈ ನಡುವೆ, ದುಷ್ಕರ್ಮಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ವಿರೋಧ ಪಕ್ಷವಾದ ಕಾಂಗ್ರೆಸ್ ನ ವಿದ್ಯಾರ್ಥಿ ಘಟಕ ನ್ಯಾಶನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದ ಸದಸ್ಯರು ಪ್ರತಿಭಟನೆ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News