×
Ad

ಮುಂಬೈನ ಕಾರ್ಪೊರೇಟ್ ಪಾರ್ಕ್ ನಲ್ಲಿ ಬೆಂಕಿ ಅವಘಡ; 50 ಜನರ ರಕ್ಷಣೆ

Update: 2024-03-26 21:48 IST

Photo: PTI 

ಮುಂಬೈ: ಮುಂಬೈನ ಉಪನಗರ ಮುಲುಂಡ್ ನಲ್ಲಿಯ ಆರಂತಸ್ತುಗಳ ಕಾರ್ಪೊರೇಟ್ ಪಾರ್ಕ್ ನಲ್ಲಿ ಮಂಗಳವಾರ ಬೆಂಕಿ ಅವಘಡ ಸಂಭವಿಸಿದ್ದು, ಹೊಗೆಯಿಂದ ತುಂಬಿದ್ದ ಕಟ್ಟಡದ ವಿವಿಧ ಅಂತಸ್ತುಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಸುಮಾರು 50 ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಗ್ಗೆ 9:25ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು,ಈ ಅವಘಡದಲ್ಲಿ ಯಾರಿಗೂ ಗಾಯಗಳಾಗಿರುವುದು ವರದಿಯಾಗಿಲ್ಲ ಎಂದರು.

ಬೆಂಕಿ ಎಲ್ಬಿಎಸ್ ರಸ್ತೆಯಲ್ಲಿರುವ ‘ಏವಿಯರ್ ಕಾರ್ಪೊರೇಟ್ ಪಾರ್ಕ್’ನ ಆರನೇ ಮಹಡಿಗೆ ಸೀಮಿತವಾಗಿತ್ತು. ಬೆಂಕಿಯಿಂದಾಗಿ ಈ ವಾಣಿಜ್ಯ ಕಟ್ಟಡದ ಸುಮಾರು 1,000 ಚದರಡಿ ಪ್ರದೇಶದಲ್ಲಿಯ ವೈರಿಂಗ್,ವಿದ್ಯುತ್ ಉಪಕರಣಗಳು,ಸ್ಪ್ಲಿಟ್ ಏಸಿ ಯೂನಿಟ್ ಗಳು, ಪೀಠೋಪಕರಣಗಳು ಮತ್ತು ದಾಖಲೆಗಳು ಸುಟ್ಟು ಹೋಗಿವೆ. ನಾಲ್ಕು ಅಗ್ನಿಶಾಮಕ ಯಂತ್ರಗಳು,ಮೂರು ಜಂಬೋ ಟ್ಯಾಂಕರ್ ಗಳು ಮತ್ತು ಇತರ ವಾಹನಗಳನ್ನು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿಸಲಾಗಿತ್ತು ಎಂದೂ ಅಧಿಕಾರಿಗಳು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News