×
Ad

ಜಾತಿಯ ಹೆಸರಿನಲ್ಲಿ ಅವಮಾನಿಸುವ ಉದ್ದೇಶವಿಲ್ಲದಿದ್ದರೆ ನಿಂದನೀಯ ಭಾಷೆ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಅಪರಾಧವಲ್ಲ: ಸುಪ್ರೀಂ ಕೋರ್ಟ್

Update: 2026-01-20 17:36 IST

Photo credit: PTI

ಹೊಸದಿಲ್ಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ,1989ರ ವ್ಯಾಪ್ತಿಯನ್ನು ಸ್ಪಷ್ಟಪಡಿಸುವ ಮಹತ್ವದ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯವು ಕೇವಲ ನಿಂದನೀಯ ಭಾಷೆಯು ಕಾಯ್ದೆಯಡಿ ಅಪರಾಧವಾಗುವುದಿಲ್ಲ. ಅದು ಜಾತಿಯ ಆಧಾರದಲ್ಲಿ ವ್ಯಕ್ತಿಯನ್ನು ಅವಮಾನಿಸುವ ಉದ್ದೇಶದಿಂದ ಬಳಕೆಯಾಗಿದ್ದರೆ ಮಾತ್ರ ಅಪರಾಧವಾಗುತ್ತದೆ ಮತ್ತು ಜಾತಿಯ ಬಗ್ಗೆ ತಿಳಿದಿದ್ದರೂ ಕೇವಲ ಅವಮಾನಿಸುವುದು ಇಂತಹ ನಿರ್ದಿಷ್ಟ ಉದ್ದೇಶವಿಲ್ಲದಿದ್ದರೆ ಶಿಕ್ಷಾರ್ಹವಲ್ಲ ಎಂದು ಹೇಳಿದೆ.

ಮೇಲ್ಮನವಿದಾರರ ವಿರುದ್ಧ ಕ್ರಿಮಿನಲ್ ವಿಚಾರಣೆಯನ್ನು ತಳ್ಳಿಹಾಕಿದ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಅಲೋಕ ಆರಾಧೆ ಅವರ ಪೀಠವು, ಎಫ್‌ಐಆರ್ ಅಥವಾ ದೋಷಾರೋಪ ಪಟ್ಟಿಯಲ್ಲಿ ಜಾತಿ ಆಧಾರಿತ ಅವಮಾನ ಅಥವಾ ಬೆದರಿಕೆಯನ್ನು ಆರೋಪಿಸಿರದಿದ್ದಾಗ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಕಾನೂನು ಕ್ರಮವನ್ನು ಮಂದುವರಿಸುವ ಮೂಲಕ ವಿಚಾರಣಾ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯ ತಪ್ಪೆಸಗಿವೆ ಎಂದು ಎತ್ತಿ ಹಿಡಿಯಿತು. ಜಾತಿಯ ಆಧಾರದಲ್ಲಿ ಅವಮಾನವು ಕಾಯ್ದೆಯ ಕಲಂ 3(1)(ಆರ್) ಮತ್ತು ಕಲಂ 3(1)(ಎಸ್) ಅಡಿ ಅಪರಾಧಗಳ ಪ್ರಮಖ ಅಂಶವಾಗಿದೆ ಎಂದು ಅದು ಒತ್ತಿ ಹೇಳಿತು.

ಅಂಗನವಾಡಿ ಕೇಂದ್ರದಲ್ಲಿ ನಿಂದನೆ ಮತ್ತು ಹಲ್ಲೆಯನ್ನು ಆರೋಪಿಸಿ ಎಸ್‌ಸಿ ಸಮುದಾಯದ ವ್ಯಕ್ತಿ ದಾಖಲಿಸಿದ್ದ ಎಫ್‌ಐಆರ್ ಆಧಾರದಲ್ಲಿ ತನ್ನ ವಿರುದ್ಧ ಆರಂಭಿಸಲಾದ ಕಾನೂನು ಕ್ರಮವನ್ನು ರದ್ದುಗೊಳಿಸುವಂತೆ ಕೋರಿ ತಾನು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಪಟ್ನಾ ಉಚ್ಚ ನ್ಯಾಯಾಲಯದ ಫೆ.15.2025ರ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News