×
Ad

"ನಿತಿನ್ ನಬಿನ್ ನನ್ನ ಬಾಸ್; ನಾನು ಕಾರ್ಯಕರ್ತ": ಬಿಜೆಪಿಯ ನೂತನ ರಾಷ್ಟ್ರಾಧ್ಯಕ್ಷರನ್ನು ಸ್ವಾಗತಿಸಿದ ಪ್ರಧಾನಿ ಮೋದಿ

Update: 2026-01-20 15:26 IST

ನಿತಿನ್ ನಬಿನ್ , ನರೇಂದ್ರ ಮೋದಿ | Photo Credit : X/BJP

ಹೊಸದಿಲ್ಲಿ: ಅತ್ಯಂತ ಕಿರಿಯ ವಯಸ್ಸಿಗೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ನಿತಿನ್ ನಬಿನ್ ರ ಆಯ್ಕೆಯನ್ನು ಸ್ವಾಗತಿಸಿದ ಪ್ರಧಾನಿ ನರೇಂದ್ರ ಮೋದಿ, “ನಿತಿನ್ ನಬಿನ್ ನನ್ನ ಬಾಸ್, ನಾನು ಕಾರ್ಯಕರ್ತ” ಎಂದು ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ನಿತಿನ್ ನಬಿನ್ ಸಹಸ್ರಮಾನದ ವ್ಯಕ್ತಿಯಾಗಿದ್ದು, ಅವರು ಬಿಜೆಪಿಯ ಪರಂಪರೆಯನ್ನು ಮುಂದುವರಿಸಲಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿತಿನ್ ನಬಿನ್ ತಮಗೆ ವಹಿಸಿದ ಎಲ್ಲ ಕರ್ತವ್ಯಗಳನ್ನೂ ಪೂರ್ಣ ಜವಾಬ್ದಾರಿಯೊಂದಿಗೆ ಯಶಸ್ವಿಯಾಗಿ ಪೂರೈಸಿದ್ದಾರೆ ಎಂದು ಶ್ಲಾಘಿಸಿದ ಪ್ರಧಾನಿ ಮೋದಿ, ಅವರ ತಲೆಮಾರು ಬಾಲ್ಯದಲ್ಲಿ ರೇಡಿಯೊ ಕೇಳುತ್ತಾ, ಇಂದು ಕೃತಕ ಬುದ್ಧಿಮತ್ತೆಯನ್ನು ನುರಿತವಾಗಿ ಬಳಸುವ ಹಂತಕ್ಕೆ ಬೆಳೆದು ನಿಂತಿದೆ ಎಂದೂ ಪ್ರಶಂಸಿಸಿದರು.

“ಮಾತಿನಲ್ಲಿ ಹೇಳುವುದಾದರೆ, ಇಂದಿನ ಯುವಕರಿಗೆ ನಿತಿನ್ ಅವರೇ ಮಾರ್ಗದರ್ಶಿಯಾಗಿದ್ದು, ಸಹಸ್ರಮಾನದ ವ್ಯಕ್ತಿಯಾಗಿದ್ದಾರೆ. ಅವರು ಭಾರತದಲ್ಲಿ ಪ್ರಮುಖ ಆರ್ಥಿಕ,ಸಾಮಾಜಿಕ, ತಾಂತ್ರಿಕ ಪರಿವರ್ತನೆಗೆ ಸಾಕ್ಷಿಯಾದ ತಲೆಮಾರಿಗೆ ಸೇರಿದ್ದಾರೆ. ಅವರು ತಮ್ಮ ಬಾಲ್ಯದಲ್ಲಿ ರೇಡಿಯೊ ಮೂಲಕ ಮಾಹಿತಿ ಸ್ವೀಕರಿಸಿ, ಇದೀಗ ಕೃತಕ ಬುದ್ಧಿಮತ್ತೆಯ ಸಕ್ರಿಯ ಬಳಕೆದಾರರಾಗಿರುವ ತಲೆಮಾರಿಗೆ ಸೇರಿದ್ದಾರೆ. ನಿತಿನ್ ಅವರು ಸಂಘಟನಾತ್ಮಕ ಕೆಲಸದಲ್ಲಿ ತಾರುಣ್ಯದ ಶಕ್ತಿ ಹಾಗೂ ವ್ಯಾಪಕ ಅನುಭವ ಹೊಂದಿದ್ದಾರೆ. ಇದು ನಮ್ಮ ಪಕ್ಷದ ಕಾರ್ಯಕರ್ತರಿಗೂ ಲಾಭವಾಗಲಿದೆ” ಎಂದೂ ಅವರು ಹೇಳಿದರು.

45 ವರ್ಷದ ನಿತಿನ್ ನಬಿನ್ ಅವರು ದಿವಂಗತ ಬಿಜೆಪಿ ನಾಯಕ ಹಾಗೂ ಮಾಜಿ ಶಾಸಕ ನಬಿನ್ ಕಿಶೋರ್ ಪ್ರಸಾದ್ ಸಿನ್ಹಾ ಅವರ ಪುತ್ರ. ಅವರು ಬಿಹಾರದ ಬಂಕಿಪುರ್ ವಿಧಾನಸಭಾ ಕ್ಷೇತ್ರದಿಂದ ಸತತ ಐದು ಬಾರಿ ಶಾಸಕರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News