×
Ad

ಜಿ20 ಶೃಂಗಸಭೆ: ಹುಸಿ ವದಂತಿ ಹರಡಿದ ಆರೋಪಿಯ ಬಂಧನ

Update: 2023-09-08 23:21 IST

 ಜಿ20 ಶೃಂಗಸಭೆ | Photo: NDTV 

 ಹೊಸದಿಲ್ಲಿ: ಜಿ20 ಶೃಂಗಸಭೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹುಸಿ ವದಂತಿಗಳನ್ನು ಹರಡಿದ ಆರೋಪದಲ್ಲಿ ಉತ್ತರ ದಿಲ್ಲಿಯ ಭಲ್ಸ್ವಾ ಡೈರಿ ಪ್ರದೇಶದ ವ್ಯಕ್ತಿಯೊಬ್ಬನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಬಂದೂಕುಗಳು ಹಾಗೂ ಸ್ಫೋಟಕಗಳನ್ನು ಒಯ್ಯುತ್ತಿರುವ ಆಟೋರಿಕ್ಷಾವೊಂದು ಜಿ20 ಶೃಂಗಸಭೆ ನಡೆಯುತ್ತಿರುವ ಹೊಸದಿಲ್ಲಿಯ ಪ್ರಗತಿ ಮೈದಾನದ ಪ್ರದೇಶದೆಡೆಗೆ ಸಾಗುತ್ತಿದೆ ಎಂದು ಆರೋಪಿಯು ಸಾಮಾಜಿಕ ಜಾಲತಾಣವೊಂದರಲ್ಲಿ ಪೋಸ್ಟ್ ಮಾಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

 ತಕ್ಷಣವೇ ಕಾರ್ಯಪ್ರವೃತ್ತರಾದ ಭಲ್ಸ್ವಾ ಡೇರಿ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸಾರ್ವಜನಿಕರಿಗೆ ಸುಳ್ಳು ಮಾಹಿತಿಯನ್ನು ಹರಡಿ ಆರೋಪದಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News