×
Ad

ಅಮೆರಿಕದಲ್ಲಿ ವಂಚನೆ ಪ್ರಕರಣ| ನೋಟಿಸ್ ಸ್ವೀಕರಿಸಲು ಒಪ್ಪಿಕೊಂಡ ಗೌತಮ್ ಅದಾನಿ : ವರದಿ

Update: 2026-01-31 12:56 IST

ಗೌತಮ್ ಅದಾನಿ (Photo: PTI)

ಹೊಸದಿಲ್ಲಿ: ಅಮೆರಿಕದಲ್ಲಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಬಿಲಿಯನೇರ್ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಅವರು ಯುಎಸ್ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್ಚೇಂಜ್ ಕಮಿಷನ್ ನೀಡುವ ಕಾನೂನು ನೋಟಿಸ್ ಸ್ವೀಕರಿಸಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

ನ್ಯೂಯಾರ್ಕ್‌ನ ಬ್ರೂಕ್ಲಿನ್‌ನ ಫೆಡರಲ್ ನ್ಯಾಯಾಲಯಕ್ಕೆ ಸಲ್ಲಿಸಿದ ದಾಖಲೆಗಳಲ್ಲಿ, ಅಮೆರಿಕದ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಕಮಿಷನ್ (SEC) ಹಾಗೂ ಗೌತಮ್ ಮತ್ತು ಸಾಗರ್ ಅದಾನಿ ಅವರ ಪರವಾದ ವಕೀಲರು, ನಿಯಂತ್ರಕ ಸಂಸ್ಥೆಯ ಕಾನೂನು ನೋಟಿಸ್ ಸ್ವೀಕರಿಸಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಜಂಟಿ ಅರ್ಜಿಯನ್ನು ಸಂಬಂಧಪಟ್ಟ ನ್ಯಾಯಾಲಯದಿಂದ ಅನುಮೋದನೆಗಾಗಿ ಸಲ್ಲಿಸಲಾಗಿದೆ.

ನ್ಯಾಯಾಧೀಶರು ಒಪ್ಪಿಗೆ ನೀಡಿದರೆ, ಜಂಟಿ ಅರ್ಜಿಯು ಎಸ್ಇಸಿ (SEC) ಪ್ರಕರಣ ಮುಂದುವರಿಯಲು ಅನುವು ಮಾಡಿಕೊಡುತ್ತದೆ. ಜೊತೆಗೆ ಅದಾನಿಗೆ ವಜಾ ಅರ್ಜಿ ಅಥವಾ ತಮ್ಮ ಪ್ರತಿವಾದ ಸಲ್ಲಿಸಲು 90 ದಿನಗಳ ಸಮಯ ದೊರೆಯುತ್ತದೆ. ನಂತರ ಎಸ್ಇಸಿ ಇನ್ನೂ 60 ದಿನಗಳೊಳಗೆ ತನ್ನ ವಿರೋಧವನ್ನು ಸಲ್ಲಿಸಬಹುದು. ಆ ವಿರೋಧಕ್ಕೆ ಪ್ರತಿಯಾಗಿ ಪ್ರತಿವಾದಿಗಳು 45 ದಿನಗಳ ಒಳಗೆ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಬಹುದು.

ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಕುರಿತು ಸುಳ್ಳು ಹಾಗೂ ದಾರಿ ತಪ್ಪಿಸುವ ಭರವಸೆಗಳನ್ನು ನೀಡುವ ಮೂಲಕ ಅಮೆರಿಕ ಸೆಕ್ಯುರಿಟೀಸ್ ಕಾನೂನುಗಳನ್ನು ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅದಾನಿ ಉಲ್ಲಂಘಿಸಿದ್ದಾರೆ ಎಂದು 2014ರಲ್ಲಿ ಅಮೆರಿಕ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್ಚೇಂಜ್ ಕಮಿಷನ್ ದಾವೆ ಹೂಡಿತ್ತು. ಅಮೆರಿಕ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್ಚೇಂಜ್ ಕಮಿಷನ್‌ನ ಸಿವಿಲ್ ದಾವೆಯೊಂದಿಗೆ, ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್ ಪ್ರಾಸಿಕ್ಯೂಟರ್‌ಗಳು ಭಾರತದಲ್ಲಿ ಸೌರ ವಿದ್ಯುತ್ ಯೋಜನೆಯ ಗುತ್ತಿಗೆ ಪಡೆಯಲು 250 ದಶಲಕ್ಷ ಡಾಲರ್ ಲಂಚ ನೀಡುವ ಯೋಜನೆಗೆ ನೆರವು ನೀಡಿದ ಆರೋಪದಲ್ಲಿ ಗೌತಮ್ ಅದಾನಿ, ಸಾಗರ್ ಅದಾನಿ ಹಾಗೂ ಮತ್ತಿತರರ ವಿರುದ್ಧ ದೋಷಾರೋಪ ಹೊರಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News