×
Ad

ಜಾಗತಿಕ ಟೆಕ್ ದೈತ್ಯ ಇಂಟೆಲ್ ನ CTO, AI ಮುಖ್ಯಸ್ಥರಾಗಿ ಬೆಳಗಾವಿ ಮೂಲದ ಸಚಿನ್ ಕಟ್ಟಿ ನೇಮಕ

Update: 2025-04-21 15:52 IST

 ಸಚಿನ್ ಕಟ್ಟಿ | Photo credit: Intel

ಬೆಂಗಳೂರು: ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಜಾಗತಿಕ ಟೆಕ್ ದೈತ್ಯ ಅಮೆರಿಕ ಮೂಲದ ಇಂಟೆಲ್ ಕಂಪೆನಿಯ ಮುಖ್ಯ ತಾಂತ್ರಿಕ ಅಧಿಕಾರಿ (CTO) ಹಾಗೂ ಕೃತಕ ಬುದ್ಧಿಮತ್ತೆ (AI) ವಿಭಾಗದ ಮುಖ್ಯಸ್ಥರಾಗಿ ಬೆಳಗಾವಿ ಮೂಲದ ಸಚಿನ್ ಕಟ್ಟಿ ಅವರು ನೇಮಕವಾಗಿದ್ದಾರೆ ಎಂದು ವರದಿಗಳು ಹೇಳಿವೆ.

Intel ಸಿಇಒ ಲಿಪ್ ಬೂ ಟಾನ್ ಅವರು ಇಂಟೆಲ್ ಮೆಮೊ ಮೂಲಕ ಈ ವಿಷಯ ತಿಳಿಸಿದ್ದಾರೆ. 55 ವರ್ಷದ ಸಚಿನ್ ಕಟ್ಟಿ ಅವರು ಬೆಳಗಾವಿ ಮೂಲದವರಾಗಿದ್ದು ಅವರು ತಮ್ಮ ಹೈಸ್ಕೂಲ್ ಶಿಕ್ಷಣದವರೆಗೆ ಬೆಳಗಾವಿಯಲ್ಲಿ ಇದ್ದು ನಂತರ ಪಿಯುಸಿ ಹಾಗೂ ಉನ್ನತ ವ್ಯಾಸಂಗಕ್ಕೆ ಮುಂಬೈಗೆ ತೆರಳಿ ಐಐಟಿ ಬಾಂಬೆಯಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. ನಂತರ ಮೆಸ್ಸಾಚುಯೇಟ್ಸ್‌ MIT ಯಲ್ಲಿ ಪಿ.ಎಚ್.ಡಿ ಪಡೆದಿದ್ದಾರೆ.

ಸದ್ಯ ಸಚಿನ್ ಕಟ್ಟಿ ಅವರು ಅಮೆರಿಕದ ಪ್ರಜೆಯಾಗಿ ಕ್ಯಾಲಿಫೊರ್ನಿಯಾ ರಾಜ್ಯದ ಸ್ಯ್ಟಾನ್‌ ಫೊರ್ಡ್‌ನಲ್ಲಿ ನೆಲೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News