16 ಸಾವಿರ ರೂ.ಗಡಿದಾಟಿದ ಚಿನ್ನದ ಬೆಲೆ: ಮಂಗಳೂರಿನಲ್ಲಿ ಇಂದಿನ ದರವೆಷ್ಟು?
ಸಾಂದರ್ಭಿಕ ಚಿತ್ರ (AI)
ಚಿನ್ನದ ದರಗಳು ಕ್ರಮೇಣ ಹೆಚ್ಚಾಗುತ್ತಲೇ ಇವೆ. ಈ ಸಂದರ್ಭದಲ್ಲಿ ಹೂಡಿಕೆದಾರರು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಪಾಯಕಾರಿ. ಏಕಕಾಲದಲ್ಲಿ ಭಾರೀ ಹೂಡಿಕೆ ಮಾಡುವುದು ಅಥವಾ ಸಂಪೂರ್ಣವಾಗಿ ದೂರ ಉಳಿಯುವುದೂ ಸರಿಯಲ್ಲ.
ಜನವರಿ 25ರಂದು ವಾರದ ರಜಾ ಇದ್ದ ಕಾರಣ ಚಿನ್ನದ ಬೆಲೆಯಲ್ಲಿ ಏರಿಕೆ ಆಗಿರಲಿಲ್ಲ. ಶನಿವಾರ ಬೆಳಗಿನ ವಹಿವಾಟಿನಲ್ಲಿ ಶುದ್ಧ ಮತ್ತು ಆಭರಣ ಚಿನ್ನದ ಬೆಲೆ ಗ್ರಾಂಗೆ 1 ರೂ.ರಷ್ಟು ಕುಸಿದಿತ್ತು. ಭಾನುವಾರವೂ ಕೊಂಚ ಕುಸಿತ ಕಂಡಿತ್ತು. ಸೋಮವಾರ ರಜಾ ದಿನವಾಗಿದ್ದರೂ ಚಿನ್ನದ ಬೆಲೆಯಲ್ಲಿ ವಿಪರೀತ ಏರಿಕೆ ಕಂಡಿದೆ. 2025ರಲ್ಲಿ ಈವರೆಗೆ ಚಿನ್ನದ ದರದಲ್ಲಿ ಶೇ. 64ರಷ್ಟು ಏರಿಕೆ ಕಂಡಿದೆ.
ಅಮೆರಿಕದ ಫೆಡರಲ್ ರಿಸರ್ವ್‌ನ ಬಡ್ಡಿದರ ನೀತಿ, ಕೇಂದ್ರ ಬ್ಯಾಂಕ್‌ಗಳು ಹೆಚ್ಚಾಗಿ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುತ್ತಿರುವುದು, ಹಣದುಬ್ಬರದ ಮಟ್ಟ—ಇವೆಲ್ಲವೂ ಚಿನ್ನದ ದರವನ್ನು ನಿರ್ಧರಿಸುತ್ತವೆ. ಹೀಗಾಗಿ ಬೆಲೆಯಲ್ಲಿ ಏರಿಳಿತವಾಗುತ್ತಲೇ ಹೋಗುತ್ತದೆ. ಜನವರಿ 1ರಿಂದ ಚಿನ್ನದ ಬೆಲೆ ಏರಿಕೆಯಾಗುತ್ತಲೇ ಇದೆ. ಮಧ್ಯೆ ಒಂದೆರಡು ಬಾರಿ ಮಾತ್ರ ಕುಸಿತ ಕಂಡಿದೆ. ಹೀಗೆ ಏರಿಕೆ ಎಷ್ಟು ದಿನ ಸಾಗಲಿದೆ ಎನ್ನುವುದು ಖಚಿತವಿಲ್ಲ. ಆದರೆ ಹಣಕಾಸು ತಜ್ಞರ ಪ್ರಕಾರ, “ಚಿನ್ನದ ದರಗಳು ಕ್ರಮೇಣ ಹೆಚ್ಚಾಗುತ್ತಲೇ ಇವೆ. ಈ ಸಂದರ್ಭದಲ್ಲಿ ಹೂಡಿಕೆದಾರರು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಪಾಯಕಾರಿ. ಏಕಕಾಲದಲ್ಲಿ ಭಾರೀ ಹೂಡಿಕೆ ಮಾಡುವುದು ಅಥವಾ ಸಂಪೂರ್ಣವಾಗಿ ದೂರ ಉಳಿಯುವುದು ಸರಿಯಲ್ಲ. ದೀರ್ಘಕಾಲೀನ ಗುರಿಯೊಂದಿಗೆ ಚಿನ್ನವನ್ನು ನೋಡಬೇಕು.”
ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು?
ಸೋಮವಾರ, ಜನವರಿ 26ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 16,271 ರೂ. (+245)ಕ್ಕೆ ಏರಿಕೆಯಾಗಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,915 ರೂ. (+225) ಹಾಗೂ ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 12,203 ರೂ. (+184)ಕ್ಕೆ ತಲುಪಿದೆ.