ಸತತ ಏರಿಕೆಯ ನಂತರ ಕುಸಿದ ಚಿನ್ನದ ಬೆಲೆ
ಸಾಂದರ್ಭಿಕ ಚಿತ್ರ
ಚಿನ್ನದ ಬೆಲೆ ಏರಿಕೆ ಆಭರಣ ಉದ್ಯಮದ ಮೇಲೂ ತೀವ್ರ ಪರಿಣಾಮ ಬೀರಿದೆ. ಸಾಮಾನ್ಯವಾಗಿ ಮದುವೆ ಮತ್ತು ಹಬ್ಬಗಳ ಸಮಯದಲ್ಲಿ ಹೆಚ್ಚಾಗುವ ಮಾರಾಟವು ಈಗ ನಿಧಾನಗತಿಯಲ್ಲಿ ಸಾಗಿದೆ ಎಂದು ವರದಿಯಾಗಿದೆ.
ರವಿವಾರ ಮಾರುಕಟ್ಟೆಗೆ ರಜೆ ಇದ್ದ ಕಾರಣ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿರಲಿಲ್ಲ. ಆದರೆ ಸೋಮವಾರ ವಾರದ ಮೊದಲ ವಹಿವಾಟು ಆರಂಭವಾಗಿದ್ದು, ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ.
2025ರ ಇಡೀ ವರ್ಷದಲ್ಲಿ ಚಿನ್ನ ಮತ್ತು ಬೆಳ್ಳಿ ಎರಡೂ ಹೊಸ ದಾಖಲೆಯನ್ನು ನಿರ್ಮಿಸಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್ ಗೆ ಸುಮಾರು 4500 ಡಾಲರ್ ಮೀರಿದೆ. ಅದೇ ಸಮಯದಲ್ಲಿ ಭಾರತದಲ್ಲಿ ಚಿನ್ನದ ಬೆಲೆ ಹತ್ತು ಗ್ರಾಂಗೆ 1.40 ಲಕ್ಷ ರೂ. ದಾಟಿ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಜೊತೆಗೆ ಬೆಳ್ಳಿಯ ಬೆಲೆಯೂ ಏರಿಕೆಯಾಗಿದೆ. ದೇಶಿ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಬೆಳ್ಳಿಯ ಬೆಲೆ 2.50 ಲಕ್ಷ ರೂ. ದಾಟುವ ಮೂಲಕ ಗರಿಷ್ಠ ಬೆಲೆ ಕಂಡಿದೆ.
ಆಭರಣ ಮಳಿಗೆಗಳಲ್ಲಿ ಖರೀದಿದಾರರ ಕೊರತೆ
ಆದರೆ ಖರೀದಿದಾರರು ಕಡಿಮೆಯಾಗುತ್ತಿರುವ ಕಾರಣದಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆ ಇಳಿಯುವ ಸಾಧ್ಯತೆಯಿದೆ ಎಂದೂ ತಜ್ಞರು ಹೇಳುತ್ತಿದ್ದಾರೆ. ಒಂದೇ ದಿನದಲ್ಲಿ ಶೇ.10 ರಿಂದ 20 ರಷ್ಟು ಭಾರೀ ಕುಸಿತದ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ತಜ್ಞರ ಪ್ರಕಾರ, “ಆಭರಣ ಅಥವಾ ದೈನಂದಿನ ಬಳಕೆಗೆ ಚಿನ್ನ ಖರೀದಿ ಇಳಿಕೆಯಾಗಿದೆ. ದುಬೈ ಮತ್ತು ಭಾರತದಂತಹ ಪ್ರಮುಖ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿ ರಿಯಾಯಿತಿಯಲ್ಲಿ ಲಭ್ಯವಿದೆ ಎಂಬ ಸುದ್ದಿ ಇದಕ್ಕೆ ಸಾಕ್ಷಿಯಾಗಿದೆ. ಇದರರ್ಥ ಗ್ರಾಹಕರ ಖರೀದಿಗಳು ಕಡಿಮೆಯಾಗಿವೆ, ಆದರೆ ಬೆಲೆಗಳು ಏರಿಕೆಯಾಗುತ್ತಿವೆ. ಬೆಲೆ ಹೆಚ್ಚಿರುವ ಪರಿಣಾಮ ಆಭರಣ ಉದ್ಯಮದ ಮೇಲೂ ತೀವ್ರ ಪರಿಣಾಮ ಬೀರಿದೆ. ಸಾಮಾನ್ಯವಾಗಿ ಮದುವೆ ಮತ್ತು ಹಬ್ಬಗಳ ಸಮಯದಲ್ಲಿ ಹೆಚ್ಚಾಗುವ ಮಾರಾಟವು ಈಗ ನಿಧಾನಗತಿಯಲ್ಲಿ ಸಾಗಿದೆ. ಹಿಂದೆ 22 ಕ್ಯಾರೆಟ್ ಚಿನ್ನವನ್ನು ಆರಾಮವಾಗಿ ಖರೀದಿಸುತ್ತಿದ್ದವರು ಈಗ ಹಗುರವಾದ ಆಭರಣಗಳಾದ 18 ಅಥವಾ 14 ಕ್ಯಾರೆಟ್ ಚಿನ್ನದತ್ತ ಮುಖ ಮಾಡುತ್ತಿದ್ದಾರೆ”.
ಮಂಗಳೂರಿನಲ್ಲಿ ಇಂದು ಚಿನ್ನದ ದರವೆಷ್ಟು?
ಸೋಮವಾರ ಡಿಸೆಂಬರ್ 29ರಂದು ಮಂಗಳೂರಿನಲ್ಲಿ ಚಿನ್ನದ ಬೆಲೆ ಸ್ವಲ್ಪ ಕುಸಿತ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ 14,171(-71) ರೂ., ಒಂದು ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 12,990(-65) ರೂ., ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನ 10,628 (-54) ರೂ. ಬೆಲೆಗೆ ತಲುಪಿದೆ.
ಭಾರತದಲ್ಲಿ ಇಂದಿನ ಚಿನ್ನದ ದರ
ಡಿಸೆಂಬರ್ 29ರಂದು ಭಾರತದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಹತ್ತು ಗ್ರಾಂಗೆ 1,41,710 ರೂ.ಗೆ ಏರಿದೆ. ಹಿಂದಿನ ದಿನಕ್ಕೆ ಹೋಲಿಸಿದರೆ 710 ರೂ. ಕುಸಿದಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಹತ್ತು ಗ್ರಾಂಗೆ ರೂ. 1,29,900 ಗೆ ಏರಿದ್ದು, 650 ಕುಸಿತ ಕಂಡಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಹತ್ತು ಗ್ರಾಂಗೆ 540 ರೂ. ಗೆ ಕುಸಿದು 1,06280 ರೂ. ತಲುಪಿದೆ.