×
Ad

ಗಗನಕ್ಕೇರಿದ ಚಿನ್ನದ ಬೆಲೆ | ಒಂದೇ ದಿನದಲ್ಲಿ ಪ್ರತಿ ಗ್ರಾಂ ಮೇಲೆ ಸಾವಿರದಷ್ಟು ಏರಿಕೆ; ಇಂದಿನ ದರವೆಷ್ಟು?

Update: 2026-01-29 11:46 IST

ಸಾಂದರ್ಭಿಕ ಚಿತ್ರ (AI)

ಅಮೆರಿಕದ ಫೆಡರಲ್ ರಿಸರ್ವ್ ತನ್ನ ಮಾನದಂಡ ದರವನ್ನು ಶೇ 3.5ರಿಂದ 3.75ರ ಗುರಿಯ ವ್ಯಾಪ್ತಿಯಲ್ಲಿ ಸ್ಥಿರವಾಗಿರಿಸಿರುವುದು ಸ್ಪಾಟ್ ಚಿನ್ನದ ಬೆಲೆಗಳ ಹೊಸ ದಾಖಲೆ ಏರಿಕೆಗೆ ಕಾರಣವಾಗಿದೆ.

ಗುರುವಾರ ಚಿನ್ನದ ಬೆಲೆ ಔನ್ಸ್‌ಗೆ 5,500 ಡಾಲರ್ ಮೀರಿ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ಅಮೆರಿಕದ ಫೆಡ್ ದರಗಳನ್ನು ಕಾಯ್ದುಕೊಂಡ ಮೇಲೆ ಏಷ್ಯಾದ ಷೇರು ಮಾರುಕಟ್ಟೆಗಳು ಮಿಶ್ರ ವಹಿವಾಟು ನಡೆಸುತ್ತಿರುವ ಕಾರಣದಿಂದ ಚಿನ್ನದ ಬೆಲೆ ಶೇ 3ರಷ್ಟು ಹೆಚ್ಚು ಜಿಗಿದು ಹೊಸ ಗರಿಷ್ಠ ಮಟ್ಟವನ್ನು ತಲುಪಿದೆ. ಗುರುವಾರ ಅಮೆರಿಕದ ಫೆಡರಲ್ ರಿಸರ್ವ್ ತನ್ನ ಮಾನದಂಡ ದರವನ್ನು (benchmark rate) ಶೇ 3.5ರಿಂದ 3.75ರ ಗುರಿಯ ವ್ಯಾಪ್ತಿಯಲ್ಲಿ ಸ್ಥಿರವಾಗಿರಿಸಿರುವುದು ಸ್ಪಾಟ್ ಚಿನ್ನದ ಬೆಲೆಗಳ ಹೊಸ ದಾಖಲೆ ಏರಿಕೆಗೆ ಕಾರಣವಾಗಿದೆ.

ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರುತ್ತಲೇ ಹೋಗುತ್ತಿದೆ. ಇದೀಗ ಆಭರಣ ಚಿನ್ನವೂ ಒಂದೇ ದಿನದಲ್ಲಿ 1,080ರಷ್ಟು ಏರಿಕೆ ಕಂಡು 16 ಸಾವಿರದ ಗಡಿ ದಾಟಿದೆ. ಇಂದು ದೇಶದಲ್ಲಿ 1 ಗ್ರಾಂ ಆಭರಣ ಚಿನ್ನದ ಬೆಲೆ 16,395 ರೂ. ಆಗಿದೆ. ಬುಧವಾರ ಮಧ್ಯಾಹ್ನ ಇದರ ಬೆಲೆ 15,140 ರೂ. ರಷ್ಟಿತ್ತು. ಸಂಜೆ ವೇಳೆ ಸ್ವಲ್ಪ ಏರಿಕೆ ಕಂಡಿತ್ತು. ಒಟ್ಟಿನಲ್ಲಿ, ನಿನ್ನೆ ಕೊನೆಗೊಂಡ ಬೆಲೆಗೆ ಹೋಲಿಸಿದರೆ ಇಂದು ಹನ್ನೊಂದು ಗಂಟೆಯ ವಹಿವಾಟಿನಲ್ಲಿ ಆಭರಣ ಚಿನ್ನದ ಬೆಲೆ 1,080 ರೂ. ಏರಿಕೆಯಾಗಿ 16 ಸಾವಿರದ ಗಡಿ ದಾಟಿದೆ.

ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು?

ಗುರುವಾರ ಜನವರಿ 29ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಮತ್ತೆ ದಿಢೀರ್ ಏರಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 17,885 (+1,177) ರೂ. ಗೆ ಏರಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 16,395(+1,080) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 13,414(+883) ರೂ. ಬೆಲೆಗೆ ತಲುಪಿದೆ.

ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ

ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಇನ್ನಷ್ಟು ದುಬಾರಿಯಾಗಿದೆ. ಒಂದು ಗ್ರಾಂ ಬೆಲೆ 17,885 ರೂ. ಆಗಿದೆ. ಬುಧವಾರ 16,708 ರೂ. ಇತ್ತು. ಒಂದೇ ದಿನದಲ್ಲಿ 1,177 ರೂ. ಏರಿಕೆ ಕಂಡಿದೆ. 22 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂ ಬೆಲೆ ಇಂದು 16,395 ರೂ. ಆಗಿದ್ದು, ನಿನ್ನೆ 15,315 ರೂ. ಇತ್ತು. ಬುಧವಾರಕ್ಕೆ ಹೋಲಿಸಿದರೆ ಇಂದು ದಿಢೀರ್‌ 1,080 ರೂ. ಏರಿಕೆ ಕಂಡಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಕೂಡಾ ಇಂದು ಭರ್ಜರಿ ಏರಿಕೆ ಕಂಡಿದೆ. 1 ಗ್ರಾಂ ಚಿನ್ನದ ಬೆಲೆ ಇಂದು 13,414 ರೂ. ಆಗಿದ್ದು, ನಿನ್ನೆ 12,531 ರೂ. ಇತ್ತು. ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ ಒಟ್ಟು 883 ರೂ. ಹೆಚ್ಚಳ ಕಂಡಿದೆ.

ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ ಹೇಗಿದೆ?

ದಿಲ್ಲಿಯಲ್ಲಿ 24 ಕ್ಯಾರೆಟ್ ಚಿನ್ನದ ದರ 17,900 (+ 1,177) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 16,410 (+ 1,080) ರೂ. ಇದೆ.

ಮುಂಬೈ 24 ಕ್ಯಾರೆಟ್ ಚಿನ್ನದ ದರ 17,900 (+ 1,177) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 16,410 (+ 1,080) ರೂ. ಇದೆ.

ಅಹಮದಾಬಾದ್ 24 ಕ್ಯಾರೆಟ್ ಚಿನ್ನದ ದರ 17,900 (+ 1,177) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 16,410 (+ 1,080) ರೂ. ಇದೆ.

ಚೆನ್ನೈನಲ್ಲಿ 24 ಕ್ಯಾರೆಟ್ ಚಿನ್ನದ ದರ 18,328 (+ 1,299) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 16,800 (+ 1,190) ರೂ. ಇದೆ.

ಕೋಲ್ಕತ್ತಾದಲ್ಲಿ 24 ಕ್ಯಾರೆಟ್ ಚಿನ್ನದ ದರ 17,885 (+ 1,177) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 16,395 (+ 1,080) ರೂ. ಇದೆ.

ಹೈದರಾಬಾದ್ನಲ್ಲಿ 24 ಕ್ಯಾರೆಟ್ ಚಿನ್ನದ ದರ 17,885 (+ 1,177) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 16,395 (+ 1,080) ರೂ. ಇದೆ.

ಜೈಪುರದಲ್ಲಿ 24 ಕ್ಯಾರೆಟ್ ಚಿನ್ನದ ದರ 17,900 (+ 1,177) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 16,410 (+ 1,080) ರೂ. ಇದೆ.

ಭೋಪಾಲ್ ನಲ್ಲಿ 24 ಕ್ಯಾರೆಟ್ ಚಿನ್ನದ ದರ 17,890 (+1,177) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 16,400 (+1,080) ರೂ. ಇದೆ.

ಲಖನೌಲ್ಲಿ 24 ಕ್ಯಾರೆಟ್ ಚಿನ್ನದ ದರ 17,900 (+ 1,177) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 16,410 (+ 1,080) ರೂ. ಇದೆ.

ಚಂಡೀಗಢದಲ್ಲಿ 24 ಕ್ಯಾರೆಟ್ ಚಿನ್ನದ ದರ 17,900 (+ 1,177) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 16,410 (+ 1,080) ರೂ. ಇದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News