ಬಾರಾಮತಿಯಲ್ಲಿ ವಿಮಾನ ದುರಂತ | ಸ್ವಗ್ರಾಮದಲ್ಲಿ PSO ವಿದಿಪ್ ಜಾಧವ್ ಅಂತ್ಯಕ್ರಿಯೆ
Update: 2026-01-29 11:25 IST
Photo credit: X/ANI
ಸತಾರಾ/ಬಾರಾಮತಿ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಖಾಸಗಿ ಭದ್ರತಾ ಅಧಿಕಾರಿ (ಪಿಎಸ್‌ಒ) ವಿದಿಪ್ ದಿಲೀಪ್ ಜಾಧವ್ ಅವರ ಅಂತ್ಯಕ್ರಿಯೆಯನ್ನು ಬುಧವಾರ ರಾತ್ರಿ ಸತಾರಾ ಜಿಲ್ಲೆಯ ಅವರ ಸ್ವಗ್ರಾಮದಲ್ಲಿ ಕುಟುಂಬದವರು ನೆರವೇರಿಸಿದರು.
ಜಾಧವ್ ಅವರ ಪುಟ್ಟ ಮಗ ಅಂತ್ಯಕ್ರಿಯೆಯ ವಿಧಿಗಳನ್ನು ಪೂರೈಸಿದರು.
ಬಾರಾಮತಿಯಲ್ಲಿ ಮಂಗಳವಾರ ಸಂಭವಿಸಿದ ಚಾರ್ಟರ್ ವಿಮಾನ ಅಪಘಾತದಲ್ಲಿ ಜಾಧವ್ ಪ್ರಯಾಣಿಸುತ್ತಿದ್ದು, ವಿಮಾನದಲ್ಲಿದ್ದ ಎಲ್ಲ ಐವರು ಮೃತಪಟ್ಟಿದ್ದರು.
ಜಾಧವ್ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು. ಅಪಘಾತದ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಎಂದು ಸ್ಥಳೀಯರು ಇದೆ ವೇಳೆ ಆಗ್ರಹಿಸಿದ್ದಾರೆ.