×
Ad

ಮಧ್ಯಪ್ರದೇಶ | ವಿದ್ಯಾರ್ಥಿಗಳಿಗೆ ಮದ್ಯ ನೀಡಿದ ಶಿಕ್ಷಕನ ವಿಡಿಯೊ ವೈರಲ್; ಆರೋಪಿಯ ಅಮಾನತು

Update: 2025-04-19 12:31 IST

Image Credit: Screengrab/X

ಕತ್ನಿ (ಮಧ್ಯಪ್ರದೇಶ): ತನ್ನ ವಿದ್ಯಾರ್ಥಿಗಳಿಗೆ ಸರಕಾರಿ ಶಾಲೆಯ ಶಿಕ್ಷಕನೊಬ್ಬ ಮದ್ಯ ನೀಡಿದ ಘಟನೆ ಮಧ್ಯಪ್ರದೇಶದ ಕತ್ನಿ ಜಿಲ್ಲೆಯಲ್ಲಿ ನಡೆದಿದ್ದು, ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆಯೇ, ಆರೋಪಿ ಶಿಕ್ಷಕನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಶನಿವಾರ ಅಧಿಕಾರಿಯೊಬ್ಬರು ತಿಳಿಸಿದರು.

ಬರಾವರ ಬ್ಲಾಕಿನ ಖಿರ್ಹಾನಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಲಾಲ್ ನವೀನ್ ಪ್ರತಾಪ್ ಸಿಂಗ್ ತನ್ನ ವಿದ್ಯಾರ್ಥಿಗಳಿಗೆ ಮದ್ಯ ನೀಡುತ್ತಿರುವ ವಿಡಿಯೊ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

ಈ ವಿಡಿಯೊವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ದಿಲೀಪ್ ಕುಮಾರ್ ಯಾದವ್, ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಶಿಕ್ಷಣಾಧಿಕಾರಿ ಒ‌.ಪಿ.ಸಿಂಗ್‌ಗೆ ನಿರ್ದೇಶನ ನೀಡಿದ್ದಾರೆ ಎಂದು ಅವರು ಹೇಳಿದರು.

ಅರೋಪಿ ಶಿಕ್ಷಕ ಲಾಲ್ ನವೀನ್ ಪ್ರತಾಪ್ ಸಿಂಗ್‌ನನ್ನು ಮಧ್ಯಪ್ರದೇಶ ಸೇವಾ (ನಡತೆ) ನಿಯಮಗಳಡಿ, ದುರ್ನಡತೆ, ಮದ್ಯ ಸೇವಿಸುವಂತೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಹಾಗೂ ಶಿಕ್ಷಕರ ಘನತೆಗೆ ಧಕ್ಕೆ ತಂದ ಆರೋಪಗಳ ಮೇಲೆ ತಕ್ಷಣವೇ ಅಮಾನತುಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಓರ್ವ ವ್ಯಕ್ತಿ ಕೊಠಡಿಯೊಂದರಲ್ಲಿ ಸಣ್ಣ ಮಕ್ಕಳಿಗೆ ಲೋಟಗಳಲ್ಲಿ ಮದ್ಯ ಸರಬರಾಜು ಮಾಡುತ್ತಿರುವುದು ಹಾಗೂ ಅದನ್ನು ಸೇವಿಸುವುದಕ್ಕೂ ಮುನ್ನ, ಅದಕ್ಕೆ ನೀರನ್ನು ಬೆರೆಸಿಕೊಳ್ಳುವಂತೆ ಓರ್ವ ಬಾಲಕನಿಗೆ ಹೇಳುತ್ತಿರುವುದನ್ನು ಕೇಳಬಹುದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News