×
Ad

ಹನಿಮೂನ್ ಗೆ ಗೋವಾ ಬದಲು ಅಯೋಧ್ಯೆಗೆ; ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪತ್ನಿ!

Update: 2024-01-25 21:16 IST

 ಅಯೋಧ್ಯೆ  | Photo : PTI 

ಭೋಪಾಲ್ : ಹನಿಮೂನಿಗೆ ಗೋವಾಕ್ಕೆ ಕರೆದುಕೊಂಡು ಹೋಗುತ್ತೇನೆ ಎಂಬ ಭರವಸೆ ನೀಡಿ ಅಯೋಧ್ಯೆಗೆ ಕರೆದುಕೊಂಡು ಹೋದ ಗಂಡನಿಂದ ವಿಚ್ಛೇದನ ಕೋರಿ ಮಧ್ಯಪ್ರದೇಶದ ಮಹಿಳೆಯೊಬ್ಬರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಮಹಿಳೆ ಭೋಪಾಲದ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅಲ್ಲಿ ದಂಪತಿಯನ್ನು ಆಪ್ತ ಸಮಾಲೋಚನೆಗೆ ಒಳಪಡಿಸಲಾಗಿದೆ. ಈ ದಂಪತಿಯ ಮದುವೆ ಕಳೆದ ವರ್ಷದ ಆಗಸ್ಟ್ ನಲ್ಲಿ ನಡೆದಿತ್ತು.

ಗಂಡ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಹನಿಮೂನಿಗೆ ವಿದೇಶಕ್ಕೆ ಕರೆದುಕೊಂಡು ಹೋಗುವಂತೆ ಹೆಂಡತಿಯು ಗಂಡನಲ್ಲಿ ಕೇಳಿದ್ದರು. ಅದಕ್ಕೆ, ಮೊದಲು ನಾವು ದೇಶದಲ್ಲಿನ ಧಾರ್ಮಿಕ ಸ್ಥಳವೊಂದಕ್ಕೆ ಹೋಗಬೇಕು, ನಾವು ದೇವಸ್ಥಾನವೊಂದಕ್ಕೆ ಹೋಗಬೇಕೆಂದು ನನ್ನ ಹೆತ್ತವರು ಬಯಸಿದ್ದಾರೆ ಎಂದು ಗಂಡ ಉತ್ತರಿಸಿದ್ದರು.

ಆದರೆ, ಬಳಿಕ ಗೋವಾಕ್ಕೆ ಪ್ರವಾಸ ಹೋಗುವ ಬಗ್ಗೆ ದಂಪತಿಯಲ್ಲಿ ಒಮ್ಮತ ಏರ್ಪಟ್ಟಿತ್ತು ಎನ್ನಲಾಗಿದೆ. ಆದಾಗ್ಯೂ, ತನ್ನ ತಾಯಿಯ ಇಚ್ಛೆಯಂತೆ ನಾವು ಅಯೋಧ್ಯೆ ಮತ್ತು ವಾರಾಣಸಿಗೆ ಹೋಗುತ್ತಿದ್ದೇವೆ ಎಂದು ಪ್ರವಾಸದ ಒಂದು ದಿನ ಮುನ್ನ ಗಂಡ ನನಗೆ ತಿಳಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ದಂಪತಿ ಪ್ರವಾಸಕ್ಕೆ ಹೋದರೂ, ವಾಪಸಾದ ಬಳಿಕ ಅವರ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಅಂತಿಮವಾಗಿ, ಗಂಡನಿಂದ ವಿಚ್ಛೇದನೆ ಕೋರಿ ಮಹಿಳೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ದಂಪತಿಯ ಆಪ್ತ ಸಮಾಲೋಚನೆ ಮುಂದುವರಿದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News