×
Ad

ಬಿಜೆಪಿ ನಾಯಕನಿಗೆ 7 ಸೆಕೆಂಡ್ ಗಳಲ್ಲಿ 5 ಬಾರಿ ತಲೆಬಾಗಿ ನಮಸ್ಕರಿಸಿದ IAS ಅಧಿಕಾರಿ ಟೀನಾ ದಾಬಿ | ವಿಡಿಯೋ ವೈರಲ್

Update: 2024-10-25 19:28 IST
PC : NDTV

ಹೊಸದಿಲ್ಲಿ: ರಾಜಸ್ಥಾನದ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಬಿಜೆಪಿ ಮುಖಂಡ ಸತೀಶ್ ಪೂನಿಯಾ ಅವರಿಗೆ ಐಎಎಸ್ ಅಧಿಕಾರಿ ಟೀನಾ ದಾಬಿ ಹಲವು ಬಾರಿ (7 ಸೆಕೆಂಡ್ ಗಳಲ್ಲಿ 5 ಬಾರಿ) ತಲೆಬಾಗಿ ನಮಸ್ಕರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ಟೀನಾ ದಾಬಿ ಕಳೆದ ತಿಂಗಳು ರಾಜಸ್ಥಾನದ ಬಾರ್ಮರ್‌ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ವೈರಲ್ ಆಗಿರುವ ವಿಡಿಯೋದಲ್ಲಿ, ಕಾರಿನಿಂದ ಫೋನ್ ನಲ್ಲಿ ಮಾತನಾಡುತ್ತಾ ಇಳಿದ ಬಿಜೆಪಿ ಮುಖಂಡ ಸತೀಶ್ ಪೂನಿಯಾಗೆ ಟೀನಾ ದಾಬಿ ತಲೆ ಬಾಗಿ ನಮಸ್ಕರಿಸುತ್ತಾರೆ. ಸತೀಶ್ ಪೂನಿಯಾ ಪೋನ್ ನೋಡುತ್ತಿದ್ದರು, ಜಿಲ್ಲಾಧಿಕಾರಿ ಮತ್ತೆ ಮತ್ತೆ ತಲೆಬಾಗಿ ನಮಸ್ಕರಿಸಿದ್ದು, ಏಳು ಸೆಕೆಂಡುಗಳಲ್ಲಿ ಐದು ಬಾರಿ ತಲೆಬಾಗಿ ನಮಸ್ಕರಿಸುವುದು ಕಂಡು ಬಂದಿದೆ.

Full View

ಈ ವೇಳೆ ಧನ್ಯವಾದಗಳು, ಧನ್ಯವಾದಗಳು, ಟೀನಾ ದಾಬಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಶುಚಿತ್ವವನ್ನು ಕಾಪಾಡಲಾಗುತ್ತಿದೆ. ಡಸ್ಟ್ ಬಿನ್ ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಪುನಿಯಾ ಅವರು ಟೀನಾ ದಾಬಿಗೆ ಪ್ರಶಂಸೆಯ ಸುರಿಮಳೆಗೈಯ್ಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಇದಲ್ಲದೆ ಪೂನಿಯಾ ಫೋನ್ ಅನ್ನು ಕುರ್ತಾದ ಜೇಬಿನಲ್ಲಿರಿಸಿ, ನೀವು ಬೆದರಿಸುತ್ತಿದ್ದೀರಿ ಎಂದು ಹಾಸ್ಯ ಮಾಡಿದ್ದಾರೆ, ನಂತರ, ನೀವು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ, ಬಾರ್ಮರ್ ಕೂಡ ಇಂದೋರ್ ನಂತೆಯೇ ಆಗಲಿದೆ. ನೀವು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News