×
Ad

ಹೆಚ್ಚುತ್ತಿರುವ ಹೊಸಬಗೆಯ ವಂಚನೆ: ಗ್ರಾಹಕರಿಗೆ ಐಸಿಐಸಿಐ ಎಚ್ಚರಿಕೆ

Update: 2024-04-03 08:57 IST

Photo:wikipedia.org/wiki/ICICI_Bank

ಮುಂಬೈ: ದುರುದ್ದೇಶಪೂರ್ವಕ ಲಿಂಕ್ ಗಳು ಹಾಗೂ ಫೈಲ್ ಗಳ ಬಗ್ಗೆ ಗ್ರಾಹಕರು ಎಚ್ಚರದಿಂದ ಇರಬೇಕು ಎಂದು ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಸೂಚನೆ ನೀಡಿದೆ. ದುರುದ್ದೇಶಪೂರ್ವಕವಾದ ಫೈಲ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವುದು ಮತ್ತು ದುರುದ್ದೇಶಪೂರ್ವಕವಾದ ಲಿಂಕ್ ಗಳನ್ನು ಕ್ಲಿಕ್ ಮಾಡುವುದರಿಂದ ಗ್ರಾಹಕರು ಸೈಬರ್ ಅಪರಾಧಕ್ಕೆ ಬಲೆ ಬೀಳಬಹುದು ಎಂದು ಹೇಳಿದೆ. ಇಂತಹ ಫೈಲ್ ಗಳು ಗ್ರಾಹಕರ ಮೊಬೈಲ್ ಗಳಿಂದ ಪಾವತಿ ಅಪ್ಲಿಕೇಶನ್ ಗಳ ನೋಂದಣಿ ಕುರಿತ ಮಾಹಿತಿಯ ಸಂದೇಶಗಳು ಫಾರ್ವರ್ಡ್ ಆಗುತ್ತವೆ ಅಥವಾ ಓಟಿಪಿ ಹಾಗೂ ಇತರ ಸೂಕ್ಷ್ಮ ಮಾಹಿತಿಗಳು ಕೂಡಾ ವರ್ಗಾವಣೆಯಾಗುವ ಸಾಧ್ಯತೆ ಇದೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.

ಗ್ರಾಹಕರು ಇಂಥ ವಂಚನೆಗಳ ಬಗ್ಗೆ ಎಚ್ಚರದಿಂದ ಇರಬೇಕು ಮತ್ತು ಇಂತಹ ಅನುಮಾನಾಸ್ಪದ/ ದುರುದ್ದೇಶಪೂರ್ವಕ ಅಪ್ಲಿಕೇಶನ್ ಗಳನ್ನು ತಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಅಳವಡಿಸಿಕೊಳ್ಳಬಾರದು ಎಂದು ಮನವಿ ಮಾಡಿದೆ.

ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ಎಂದೂ ನಿರ್ದಿಷ್ಟ ಮೊಬೈಲ್ ಸಂಖ್ಯೆಗೆ ಕರೆ ಮಾಡುವಂತೆ ಎಸ್ಎಂಎಸ್/ವಾಟ್ಸಪ್ ಸಂದೇಶಗಳನ್ನು ಕಳುಹಿಸುವುದಿಲ್ಲ ಅಥವಾ ಯಾವುದೇ ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವಂತೆ ಸೂಚಿಸುವುದಿಲ್ಲ ಎಂದು ಬ್ಯಾಂಕ್ ಪ್ರಕಟಣೆ ಹೇಳಿದೆ. ಜತೆಗೆ ಗ್ರಾಹಕರು ಸದಾ ಕೆಲವು ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದೂ ಸಲಹೆ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News