×
Ad

ರಶ್ಯದಿಂದ ಕಚ್ಚಾ ತೈಲ ಆಮದು: ಡಿಸೆಂಬರ್ ತಿಂಗಳಲ್ಲಿ ಮೂರನೇ ಸ್ಥಾನಕ್ಕೆ ಕುಸಿದ ಭಾರತ

ರಶ್ಯ ಕಚ್ಚಾ ತೈಲ ಆಮದನ್ನು ಕಡಿತಗೊಳಿಸಿದ ರಿಲಯನ್ಸ್ ಸಮೂಹ

Update: 2026-01-13 19:34 IST

ಸಾಂದರ್ಭಿಕ ಚಿತ್ರ | Photo Credit : freepik

ಹೊಸದಿಲ್ಲಿ: ರಿಲಯನ್ಸ್ ಸಮೂಹ ಸಂಸ್ಥೆಗಳು ಹಾಗೂ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ರಶ್ಯದಿಂದ ಕಚ್ಚಾ ತೈಲ ಆಮದನ್ನು ಗಮನಾರ್ಹವಾಗಿ ಕಡಿತಗೊಳಿಸಿರುವ ಹಿನ್ನೆಲೆಯಲ್ಲಿ, ಡಿಸೆಂಬರ್ ತಿಂಗಳಲ್ಲಿ ರಶ್ಯದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ದೇಶಗಳ ಪೈಕಿ ಭಾರತ ಮೂರನೇ ಸ್ಥಾನಕ್ಕೆ ಕುಸಿದಿದೆ ಎಂದು ಮಂಗಳವಾರ ಯುರೋಪಿಯನ್ ಒಕ್ಕೂಟದ ಚಿಂತಕರ ಚಾವಡಿ ತಿಳಿಸಿದೆ.

ಇಂಧನ ಮತ್ತು ಶುದ್ಧ ಗಾಳಿ ಸಂಶೋಧನಾ ಕೇಂದ್ರದ (CREA) ಪ್ರಕಾರ, ಹಿಂದಿನ ತಿಂಗಳುಗಳಲ್ಲಿ ಪ್ರತಿ ತಿಂಗಳು ಸರಾಸರಿ 3.3 ಶತಕೋಟಿ ಯೂರೊ ಮೌಲ್ಯದ ರಶ್ಯ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದ್ದ ಭಾರತ, ಡಿಸೆಂಬರ್ ತಿಂಗಳಲ್ಲಿ 2.3 ಶತಕೋಟಿ ಯೂರೊ ಮೌಲ್ಯದ ಕಚ್ಚಾ ತೈಲವನ್ನು ಮಾತ್ರ ಆಮದು ಮಾಡಿಕೊಂಡಿದೆ.

“ಡಿಸೆಂಬರ್ ತಿಂಗಳಲ್ಲಿ 2.6 ಶತಕೋಟಿ ಯೂರೊ ಮೌಲ್ಯದ ಕಚ್ಚಾ ತೈಲವನ್ನು ಖರೀದಿಸುವ ಮೂಲಕ, ಟರ್ಕಿ ಭಾರತವನ್ನು ಹಿಂದಿಕ್ಕಿ ಎರಡನೇ ಅತಿ ದೊಡ್ಡ ರಶ್ಯ ಕಚ್ಚಾ ತೈಲ ಆಮದುದಾರ ದೇಶವಾಗಿ ಹೊರಹೊಮ್ಮಿದೆ” ಎಂದು ವರದಿ ಹೇಳಿದೆ.

ಚೀನಾ ಅತಿ ದೊಡ್ಡ ಖರೀದಿದಾರನಾಗಿ ಮುಂದುವರಿದಿದ್ದು, ಐದು ಪ್ರಮುಖ ಆಮದುದಾರರಿಂದ ರಶ್ಯಗೆ ಬರುತ್ತಿರುವ ಒಟ್ಟು ಆದಾಯದಲ್ಲಿ ಶೇ.48ರಷ್ಟು (6 ಶತಕೋಟಿ ಯೂರೊ) ಮೌಲ್ಯದ ರಶ್ಯ ಕಚ್ಚಾ ತೈಲವನ್ನು ಅದು ಒಂದೇ ದೇಶವಾಗಿ ಆಮದು ಮಾಡಿಕೊಳ್ಳುತ್ತಿದೆ.

“ರಶ್ಯ ಕಚ್ಚಾ ತೈಲವನ್ನು ಖರೀದಿಸುತ್ತಿರುವ ಮೂರನೇ ಅತಿ ದೊಡ್ಡ ದೇಶ ಭಾರತವಾಗಿದ್ದು, ಡಿಸೆಂಬರ್ ತಿಂಗಳಲ್ಲಿ 2.3 ಶತಕೋಟಿ ಯೂರೊ ಮೌಲ್ಯದ ರಶ್ಯ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದೆ” ಎಂದು ಇಂಧನ ಮತ್ತು ಶುದ್ಧ ಗಾಳಿ ಸಂಶೋಧನಾ ಕೇಂದ್ರ (CREA) ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News