×
Ad

ಬೀದಿನಾಯಿ ಕಡಿತ, ಸಂಭವಿಸುವ ಸಾವಿಗೆ ನೀವು ಬೆಲೆ ತೆರಬೇಕು: ರಾಜ್ಯಗಳು, ಆಹಾರ ನೀಡುವವರಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ

Update: 2026-01-13 16:17 IST

Photo credit: PTI

ಹೊಸದಿಲ್ಲಿ: ಪ್ರತಿ ಬೀದಿನಾಯಿ ಕಡಿತ ಮತ್ತು ಅದರಿಂದ ಸಂಭವಿಸುವ ಪ್ರತಿ ಸಾವಿಗೆ ತಾನು ರಾಜ್ಯಗಳಿಗೆ ‘ಭಾರೀ’ ಹೊಣೆಗಾರಿಕೆಯನ್ನು ವಿಧಿಸಬಹುದು ಮತ್ತು ಜೀವಮಾನವಿಡೀ ಪರಿಣಾಮ ಬೀರುವ ದಾಳಿಗಳಿಗೆ ನಾಯಿಗಳಿಗೆ ಆಹಾರ ನೀಡುವವರನ್ನೂ ಹೊಣೆಗಾರರನ್ನಾಗಿ ಮಾಡಬಹುದು ಎಂದು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಸುಳಿವು ನೀಡಿದೆ.

ಬೀದಿನಾಯಿಗಳು ಜನರನ್ನು ಕಚ್ಚಲು ಮತ್ತು ಬೆನ್ನಟ್ಟಲು ಏಕೆ ಅವಕಾಶ ನೀಡಬೇಕು ಎಂದು ಅದು ಪ್ರಶ್ನಿಸಿತು.

ಬೀದಿನಾಯಿಗಳಿಗೆ ಸಂಬಂಧಿಸಿದಂತೆ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಸರ್ವೋಚ್ಚ ನ್ಯಾಯಾಲಯವು, ‘ಪ್ರತಿ ನಾಯಿ ಕಡಿತಕ್ಕೆ,ಪ್ರತಿ ಸಾವಿಗಾಗಿ ನಾವು ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸದ ಸರಕಾರಗಳು ಭಾರೀ ಪರಿಹಾರವನ್ನು ಪಾವತಿಸುವಂತೆ ಮಾಡುವ ಸಾಧ್ಯತೆಯಿದೆ, ಜೊತೆಗೆ ನಾಯಿಗಳಿಗೆ ಆಹಾರವನ್ನು ನೀಡುವವರನ್ನೂ ಹೊಣೆಗಾರರನ್ನಾಗಿ ಮಾಡುತ್ತೇವೆ. ನೀವು ಬೀದಿನಾಯಿಗಳನ್ನು ನಿಮ್ಮ ಮನೆಗಳಿಗೆ ಕರೆದೊಯ್ದು ಇಟ್ಟುಕೊಳ್ಳಿ. ಬೀದಿಗಳಲ್ಲಿ ಸುತ್ತಾಡಲು, ಕಚ್ಚಲು ಮತ್ತು ಬೆನ್ನಟ್ಟಲು ಅವುಗಳನ್ನೇಕೆ ಬಿಡಬೇಕು? ನಾಯಿ ಕಡಿತದ ಪರಿಣಾಮವು ಜೀವಮಾನ ಪರ್ಯಂತ ಇರುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿತು.

ವಿಚಾರಣೆ ವೇಳೆ ಸರ್ವೋಚ್ಚ ನ್ಯಾಯಾಲಯವು, ಒಂದು ನಿರ್ದಿಷ್ಟ ಸಂಸ್ಥೆಯು ಆಹಾರವನ್ನು ನೀಡುವ ನಾಯಿಗಳು ಒಂಭತ್ತರ ಹರೆಯದ ಬಾಲಕಿಯನ್ನು ಕೊಂದರೆ ಯಾರನ್ನು ಹೊಣೆಯಾಗಿಸಬೇಕು? ಹಾನಿಗೆ ಆ ಸಂಸ್ಥೆಯನ್ನೇ ಹೊಣೆಯಾಗಿಸಬಾರದೇ ಎಂದೂ ಪ್ರಶ್ನಿಸಿತು.

ಸರ್ವೋಚ್ಚ ನ್ಯಾಯಾಲಯವು ಬೀದಿನಾಯಿಗಳು ಮತ್ತು ಬಿಡಾಡಿ ಜಾನುವಾರುಗಳ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದು, ನ್ಯಾಯಮೂರ್ತಿಗಳಾದ ವಿಕ್ರಮನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ.ಅಂಜಾರಿಯಾ ಅವರ ಪೀಠವು ಬೀದಿಗಳು ಮತ್ತು ಹೆದ್ದಾರಿಗಳಲ್ಲಿ ಪ್ರಾಣಿಗಳ ಕುರಿತು ಗಂಭೀರ ಸುರಕ್ಷತಾ ಕಳವಳಗಳನ್ನು ವ್ಯಕ್ತಪಡಿಸಿದೆ.

ಶಾಲೆಗಳು,ಆಸ್ಪತ್ರೆಗಳು,ಕ್ರೀಡಾ ಸಂಕೀರ್ಣಗಳು,ಬಸ್ ಮತ್ತು ರೈಲು ನಿಲ್ದಾಣಗಳಂತಹ ಸಾಂಸ್ಥಿಕ ಆವರಣಗಳಿಂದ ಬೀದಿನಾಯಿಗಳನ್ನು ನಿವಾರಿಸುವಂತೆ ಹಾಗೂ ಸಂತಾನಹರಣ ಶಸ್ತ್ರಚಿಕಿತ್ಸೆ ಮತ್ತು ಲಸಿಕೆ ಹಾಕಿದ ಬಳಿಕ ಅವುಗಳನ್ನು ನಿರ್ದಿಷ್ಟ ಆಶ್ರಯಗಳಿಗೆ ಸ್ಥಳಾಂತರಿಸುವಂತೆ ಸರ್ವೋಚ್ಚ ನ್ಯಾಯಾಲಯವು ಕಳೆದ ವರ್ಷದ ನ.7ರಂದು ನಿರ್ದೇಶನ ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News