×
Ad

ಭಾರತವು ಅಘೋಷಿತ ತುರ್ತು ಪರಿಸ್ಥಿತಿಯಲ್ಲಿದೆ ; ಕೇಜ್ರಿವಾಲ್ ಬಂಧನ ಕುರಿತು ಆಪ್ ಸಂಸದ ರಾಘವ್ ಚಡ್ಡಾ ಪ್ರತಿಕ್ರಿಯೆ

Update: 2024-03-22 04:56 IST

ರಾಘವ್ ಚಡ್ಡಾ Photo- PTI

ಹೊಸದಿಲ್ಲಿ: ಕೇಜ್ರಿವಾಲ್ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ ಎಎಪಿ ಸಂಸದ ರಾಘವ್ ಚಡ್ಡಾ, "ಭಾರತವು ಅಘೋಷಿತ ತುರ್ತು ಪರಿಸ್ಥಿತಿಯಲ್ಲಿದೆ" ಎಂದು ಹೇಳಿದ್ದಾರೆ.

"ಅರವಿಂದ್ ಕೇಜ್ರಿವಾಲ್ ಮುಂಬರುವ ಚುನಾವಣೆಗೆ ಮುಂಚಿತವಾಗಿ ಬಂಧಿಸಲ್ಪಟ್ಟ ಎರಡನೇ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಪ್ರತಿಪಕ್ಷ ಮುಖ್ಯಮಂತ್ರಿಯಾಗಿದ್ದಾರೆ. ನಾವು ಯಾವುದರತ್ತ ಸಾಗುತ್ತಿದ್ದೇವೆ? ಭಾರತದಲ್ಲಿ ಯಾವತ್ತೂ ಸರ್ಕಾರಿ ತನಿಖಾ ಸಂಸ್ಥೆಗಳ ದುರುಪಯೋಗವನ್ನು ನೋಡಿಲ್ಲ. ಇದು ಹೇಡಿತನದ ಕೃತ್ಯ ಮತ್ತು ಬಲಿಷ್ಠರನ್ನು ಮೌನಗೊಳಿಸುವ ಕೆಟ್ಟ ಸಂಚು. ಇದಕ್ಕೆ ವಿರೋಧವಿದೆ" ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News