×
Ad

ಭಾರತದಲ್ಲೀಗ 99.1 ಕೋಟಿ ಮತದಾರರು: ಚುನಾವಣಾ ಆಯೊಗ

Update: 2025-01-23 12:20 IST

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಭಾರತೀಯ ಚುನಾವಣಾ ಆಯೋಗದ ಅಂಕಿ-ಅಂಶದ ಪ್ರಕಾರ, ಇದೀಗ ಭಾರತದಲ್ಲಿನ ಮತದಾರರ ಸಂಖ್ಯೆ 99.1 ಕೋಟಿಗೆ ತಲುಪಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ಸಂಖ್ಯೆ 96.88 ಕೋಟಿಯಷ್ಟಿತ್ತು.

ರಾಷ್ಟ್ರೀಯ ಮತದಾರರ ದಿನಕ್ಕೂ ಮುನ್ನ ಬುಧವಾರ ಬಿಡುಗಡೆ ಮಾಡಿರುವ ಪ್ರಕಟಣೆಯ ಪ್ರಕಾರ, ಮತದಾರರ ಪಟ್ಟಿಯು ಯುವಕರು ಹಾಗೂ ಲಿಂಗದ ಆಧಾರದಲ್ಲಿ ಸಮತೋಲನ ಸಾಧಿಸಿದ್ದು, 18-29 ವರ್ಷ ವಯೋಮಾನದ ಮತದಾರರ ಸಂಖ್ಯೆ 21.7 ಕೋಟಿಷ್ಟಿದೆ. 2024ರಲ್ಲಿ 948ರಷ್ಟಿದ್ದ ಮತದಾರರ ಲಿಂಗಾನುಪಾತದ ಪ್ರಮಾಣ 2025ರಲ್ಲಿ 6 ಅಂಕಗಳಷ್ಟು ಏರಿಕೆ ಕಂಡು, 954ಕ್ಕೆ ತಲುಪಿದೆ.

ಜನವರಿ 25, 1950ರಂದು ಸ್ಥಾಪನೆಯಾದ ಭಾರತೀಯ ಚುನಾವಣಾ ಆಯೋಗದ ವಾರ್ಷಿಕೋತ್ಸವದ ಸ್ಮರಣಾರ್ಥ ಪ್ರತಿ ವರ್ಷ ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸುತ್ತಾ ಬರಲಾಗುತ್ತಿದೆ.

ಜನವರಿ 7ರಂದು ದಿಲ್ಲಿ ವಿಧಾನಸಭಾ ಚುನಾವಣೆಯನ್ನು ಪ್ರಕಟಿಸುವಾಗ, ಭಾರತದ ಮತದಾರರ ಸಂಖ್ಯೆ 100ಕ್ಕೂ ಹೆಚ್ಚು ಕೋಟಿಯಾಗುವ ಮೂಲಕ ಹೊಸ ದಾಖಲೆ ಸೃಷ್ಟಿಯಾಗಲಿದೆ ಎಂದು ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News