×
Ad

ರಾಷ್ಟ್ರ ಪ್ರೇರಣಾ ಸ್ಥಳವು ಭಾರತದ ಸ್ವಾಭಿಮಾನ, ಏಕತೆ ಮತ್ತು ಸೇವೆಯ ಸಂಕೇತವಾಗಿದೆ: ಪ್ರಧಾನಿ ಮೋದಿ

Update: 2025-12-25 21:42 IST

ನರೇಂದ್ರ ಮೋದಿ | Photo Credit : PTI 

ಲಕ್ನೋ,ಡಿ.25: ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿಯವರ 101ನೇ ಜನ್ಮದಿನವಾದ ಗುರುವಾರ ಅವರ ಜೀವನ ಮತ್ತು ಆದರ್ಶಗಳನ್ನು ಗೌರವಿಸಲು ಮುಡಿಪಾಗಿರುವ ಪ್ರಮುಖ ರಾಷ್ಟ್ರೀಯ ಸ್ಮಾರಕ ಮತ್ತು ಸಂಕೀರ್ಣವನ್ನು ಪ್ರಧಾನಿ ನರೇಂದ್ರ ಮೋದಿಯವರು ಇಲ್ಲಿ ಉದ್ಘಾಟಿಸಿದರು. ಈ ಸ್ಮಾರಕವು ಭಾರತವನ್ನು ಸ್ವಾಭಿಮಾನ, ಏಕತೆ ಮತ್ತು ಸೇವೆಯತ್ತ ಮುನ್ನಡೆಸಿದ ದೃಷ್ಟಿಕೋನವನ್ನು ಸಂಕೇತಿಸುತ್ತದೆ ಎಂದು ಅವರು ಹೇಳಿದರು.

ವಿಶಾಲ ಸಂಕೀರ್ಣವು ವಾಜಪೇಯಿಯವರ ಜೊತೆಗೆ ಬಿಜೆಪಿ ಸಿದ್ಧಾಂತಿಗಳಾದ ಶ್ಯಾಮ್ ಪ್ರಸಾದ್ ಮುಖರ್ಜಿ ಮತ್ತು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ 65 ಅಡಿ ಎತ್ತರದ ಕಂಚಿನ ಪ್ರತಿಮೆಗಳನ್ನೂ ಒಳಗೊಂಡಿದೆ.

ಕಮಲದ ಆಕಾರದಲ್ಲಿ ವಿನ್ಯಾಸಗೊಂಡಿರುವ ಸಂಕೀರ್ಣದಲ್ಲಿಯ ಅತ್ಯಾಧುನಿಕ ವಸ್ತು ಸಂಗ್ರಹಾಲಯವು 90,000 ಚ.ಅಡಿ.ಗೂ ಹೆಚ್ಚಿನ ಸ್ಥಳದಲ್ಲಿ ಹರಡಿಕೊಂಡಿದ್ದು, ರಾಷ್ಟ್ರ ನಿರ್ಮಾಣದಲ್ಲಿ ಈ ನಾಯಕರ ಕೊಡುಗೆಗಳನ್ನು ಅರಿತುಕೊಳ್ಳಲು ಸಂದರ್ಶಕರಿಗೆ ಅವಕಾಶವನ್ನು ಒದಗಿಸುತ್ತದೆ.

ಉದ್ಘಾಟನೆಯ ಬಳಿಕ ಮೋದಿ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್,ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿಯೋಗಿ ಆದಿತ್ಯನಾಥ್ ಮತ್ತಿತರರೊಂದಿಗೆ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿ ವಾಜಪೇಯಿ,ಮು ಖರ್ಜಿ ಮತ್ತು ಉಪಾಧ್ಯಾಯ ಅವರ ಬದುಕು ಮತ್ತು ಕೊಡುಗೆಗಳನ್ನು ಬಿಂಬಿಸುವ ಪ್ರದರ್ಶನಗಳನ್ನು ವೀಕ್ಷಿಸಿದರು.

ರಾಷ್ಟ್ರೀಯ ಪ್ರೇರಣಾ ಸ್ಥಳವು 65 ಎಕರೆಗೂ ಅಧಿಕ ವಿಸ್ತೀರ್ಣದ ನಿವೇಶನದಲ್ಲಿ 230 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News