×
Ad

ಕೇರಳ: ಖ್ಯಾತ ಪರಿಸರ ಹೋರಾಟಗಾರ ಕಲ್ಲೂರ್ ಬಾಲನ್ ನಿಧನ

Update: 2025-02-10 23:59 IST

Photo Credit | new indian express

ಪಾಲಕ್ಕಾಡ್: ತನ್ನ ಸಂಪೂರ್ಣ ಬದುಕನ್ನು ಪ್ರಕೃತಿಯ ಪೋಷಣೆಗೆ ಮುಡಿಪಾಗಿರಿಸಿದ್ದ ದಣಿವರಿಯದ ಪರಿಸರ ಹೋರಾಟಗಾರ ಕಲ್ಲೂರ್ ಬಾಲನ್ (76) ಪಾಲಕ್ಕಾಡಿನ ಜಿಲ್ಲಾಸ್ಪತ್ರೆಯಲ್ಲಿ ಸೋಮವಾರ ನಿಧನರಾದರು.

ಸೋಮವಾರ ಬೆಳಗ್ಗೆ ಬಾಲನ್ ಅವರಿಗೆ ಅಸ್ವಸ್ಥತೆ ಉಂಟಾಯಿತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ.

ಬಾಲನ್ ಅವರು ಪಾಲಕ್ಕಾಡ್, ತ್ರಿಶೂರು ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲಿ ಸುಮಾರು 25 ಲಕ್ಷ ಮೆಕ್ಕೆ ಜೋಳ, ಬಾಳೆ, ಬೇವು, ಗೆಣಸು, ತಾಳೆ, ಬಿದಿರು ಹಾಗೂ ಇತರ ಸಸಿಗಳನ್ನು ನೆಟ್ಟಿದ್ದಾರೆ.

100 ಎಕರೆಗೂ ಅಧಿಕ ವಿಸ್ತೀರ್ಣದ ಬಂಜರು ಬೆಟ್ಟ ಪ್ರದೇಶವನ್ನು ಒಂದು ವರ್ಷಗಳ ಕಾಲ ಶ್ರಮವಹಿಸಿ ಹಸಿರಾಗಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News