×
Ad

Kerala Local Body Election Result: 4 ಮಹಾನಗರಪಾಲಿಕೆಗಳಲ್ಲಿ ಯುಡಿಎಫ್, ತಿರುವನಂತಪುರಂನಲ್ಲಿ ಎನ್‌ಡಿಎ ಮುನ್ನಡೆ

Update: 2025-12-13 10:59 IST

Photo: Manorama

ತಿರುವನಂತಪುರಂ: ಭಾರೀ ಕುತೂಹಲ ಕೆರಳಿಸಿದ್ದ ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ಶನಿವಾರ ಬೆಳಿಗ್ಗೆ 8 ಗಂಟೆಗೆ ಆರಂಭವಾಗಿದೆ. ಆರಂಭಿಕ ಮತ ಎಣಿಕೆಯು ಸ್ಥಳೀಯ ಸಂಸ್ಥೆಗಳಲ್ಲಿ ಆಡಳಿತಾರೂಢ ಎಲ್‌ಡಿಎಫ್‌ ಮತ್ತು ವಿರೋಧ ಪಕ್ಷ ಯುಡಿಎಫ್ ನಡುವೆ ಪೈಪೋಟಿಯನ್ನು ಸೂಚಿಸುತ್ತದೆ.

2026ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ನಡೆಯುವ ಈ ಚುನಾವಣೆಯ್ನು ನಿರ್ಣಾಯಕ ಎಂದು ಪರಿಗಣಿಸಲಾಗಿದೆ.

ಆರಂಭಿಕ ಟ್ರೆಂಡ್‌ಗಳ ಪ್ರಕಾರ, ಆರು ಮಹಾನಗರಪಾಲಿಕೆಗಳ ಪೈಕಿ ನಾಲ್ಕರಲ್ಲಿ ಯುಡಿಎಫ್ ಮುನ್ನಡೆ ಸಾಧಿಸಿದೆ. 2020ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದಿದ್ದ ತಿರುವನಂತಪುರಂ ಮಹಾನಗರಪಾಲಿಕೆಯಲ್ಲಿ ಎನ್‌ಡಿಎ ಮುನ್ನಡೆ ಸಾಧಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News