×
Ad

ಕೇರಳ | ಮಲಪ್ಪುರಂ ಜಿಲ್ಲೆಯಲ್ಲಿ ನಿಫಾ ವೈರಸ್ ಸೋಂಕು ಪತ್ತೆ

Update: 2025-05-08 20:22 IST

ಸಾಂದರ್ಭಿಕ ಚಿತ್ರ

ತಿರುವನಂತಪುರಂ: ಕೇರಳದ ಮಲಪ್ಪುರಂ ಜಿಲ್ಲೆಯ 42 ವರ್ಷದ ಮಹಿಳೆಯೊಬ್ಬರಲ್ಲಿ ನಿಫಾ ವೈರಸ್ ಸೋಂಕು ದೃಢಪಟ್ಟಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್, ಈ ಸೋಂಕು ಮತ್ತಷ್ಟು ಜನರಿಗೆ ಹರಡದಂತೆ ಖಾತರಿ ಪಡಿಸಲು ತುರ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸೋಂಕಿತ ಮಹಿಳೆಗೆ ಪೆರಿಂತಲ್ಮನ್ನ ಪಟ್ಟಣದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

2018ರಲ್ಲಿ ಕೇರಳದಲ್ಲಿ ನಿಫಾ ವೈರಸ್ ಸೋಂಕು ಪತ್ತೆಯಾದ ನಂತರ, ಪ್ರತಿ ವರ್ಷವೂ ಕೇರಳದಲ್ಲಿ ನಿಫಾ ವೈರಸ್ ಸೋಂಕು ಪ್ರಕರಣಗಳು ವರದಿಯಾಗುತ್ತಿದ್ದು, ಈ ಪೈಕಿ ಬಹುತೇಕ ಪ್ರಕರಣಗಳು ಉತ್ತರ ಕೇರಳ ಜಿಲ್ಲೆಗಳಿಂದ ವರದಿಯಾಗುತ್ತಿದೆ. ಈ ಸೋಂಕಿನ ನಿಖರ ಮೂಲವನ್ನು ಇದುವರೆಗೂ ಪತ್ತೆ ಹಚ್ಚಲು ಸಾಧ್ಯಿವಾಗಿಲ್ಲ.

ಕಳೆದ ವರ್ಷ ಮಲಪ್ಪುರಂ ಜಿಲ್ಲೆಯ 14 ವರ್ಷದ ಬಾಲಕ ಹಾಗೂ ಮಲಪ್ಪುರಂ ಜಿಲ್ಲೆಯವರೇ ಆದ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ 24 ವರ್ಷದ ಯುವಕರೊಬ್ಬರು ನಿಫಾ ವೈರಸ್ ಸೋಂಕಿಗೆ ಬಲಿಯಾಗಿದ್ದರು.

ಇದಕ್ಕೂ ಮುನ್ನ, 2018ರಲ್ಲಿ ಪತ್ತೆಯಾಗಿದ್ದ ನಿಫಾ ವೈರಸ್ ಸೋಂಕು ಪ್ರಕರಣಗಳಲ್ಲಿ ಕೋಯಿಕ್ಕೋಡ್ ಜಿಲ್ಲೆಯೊಂದರಲ್ಲೇ 20 ಮಂದಿ ಮೃತಪಟ್ಟಿದ್ದರು. 2019ರಲ್ಲಿ ಓರ್ವ ವ್ಯಕ್ತಿ ಈ ಸೋಂಕಿಗೆ ಗುರಿಯಾದರೂ, ನಂತರ, ಆತ ಚೇತರಿಸಿಕೊಂಡಿದ್ದ. ಬಳಿಕ, 2021ರಲ್ಲಿ ಓರ್ವ ವ್ಯಕ್ತಿ ನಿಫಾ ವೈರಸ್ ಸೋಂಕಿಗೆ ಬಲಿಯಾಗಿದ್ದರು. 2023ರಲ್ಲಿ ನಿಫಾ ವೈರಸ್ ಸೋಂಕಿತ ಆರು ಮಂದಿಯ ಪೈಕಿ ಇಬ್ಬರು ಮೃತಪಟ್ಟಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News