×
Ad

ಖ್ಯಾತ ಶಾಸ್ತ್ರೀಯ ಗಾಯಕ ಉಸ್ತಾದ್‌ ರಶೀದ್‌ ಖಾನ್‌ ನಿಧನ

Update: 2024-01-09 17:29 IST

Photo : NDTV

ಕೊಲ್ಕತ್ತಾ : ಖ್ಯಾತ ಶಾಸ್ತ್ರೀಯ ಗಾಯಕ, ಸಂಗೀತ ಲೋಕದ ಮಾಂತ್ರಿಕ ಉಸ್ತಾದ್‌ ರಶೀದ್‌ ಖಾನ್‌ ಇಂದು ಅಪರಾಹ್ನ ಕೊಲ್ಕತ್ತಾದ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಪ್ರಾಸ್ಟೇಟ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರಿಗೆ 55 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಖ್ಯಾತ ರಾಮಪುರ್-ಸಹಸ್ವಾನ್‌ ಘರಾನಾಗೆ ಸೇರಿದ ಖಾನ್‌ ಅವರು ಘರಾನ ಸ್ಥಾಪಕ ಇನಾಯತ್‌ ಹುಸೇನ್‌ ಖಾನ್‌ ಅವರ ಮರಿಮೊಮ್ಮಗನಾಗಿದ್ದರು.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಸ್ಪತ್ರೆಯಲ್ಲಿ ಖಾನ್‌ ಅವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ರಶೀದ್ ಖಾನ್‌ ಅವರ ಅಂತ್ಯಕ್ರಿಯೆಯನ್ನು ಸಂಪೂರ್ಣ ಸರ್ಕಾರಿ ಮರ್ಯಾದೆಗಳೊಂದಿಗೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News