×
Ad

ಮಹಾರಾಷ್ಟ್ರ | ಕಂದಕಕ್ಕೆ ಉರುಳಿದ ಐಶಾರಾಮಿ ಬಸ್: 7 ಮಂದಿ ಮೃತ್ಯು, 15 ಮಂದಿಗೆ ಗಾಯ

Update: 2025-02-02 12:29 IST

ಸಾಂದರ್ಭಿಕ ಚಿತ್ರ 

ನಾಶಿಕ್: ಇಂದು ಮುಂಜಾನೆ ಐಶಾರಾಮಿ ಬಸ್ ಒಂದು ನಾಶಿಕ್-ಗುಜರಾತ್ ಹೆದ್ದಾರಿಯಲ್ಲಿ ಸುಮಾರು 200 ಅಡಿ ಆಳದ ಕಂದಕಕ್ಕೆ ಉರುಳಿದ ಪರಿಣಾಮ ಕನಿಷ್ಠ ಏಳು ಮಂದಿ ಮೃತಪಟ್ಟು, 15 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಈ ಅಪಘಾತವು ಮುಂಜಾನೆ ಸುಮಾರು 5.30ರ ವೇಳೆಗೆ ಸಂಭವಿಸಿದೆ.

ಸುದ್ದಿ ತಿಳಿಯುತ್ತಿದ್ದಂತೆಯೆ ಘಟನಾ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡಗಳು ಹಾಗೂ ಸ್ಥಳೀಯ ಪ್ರಾಧಿಕಾರಗಳು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಕರೆದೊಯ್ದವು. ಈ ಅಪಘಾತಕ್ಕೆ ನಿಖರ ಕಾರಣವೇನು ಎಂದು ಇನ್ನೂ ಅಧಿಕಾರಿಗಳು ಪತ್ತೆ ಹಚ್ಚಬೇಕಿದೆ.

ಮೃತಪಟ್ಟವರ ಗುರುತುಗಳು ಹಾಗೂ ಗಾಯಗೊಂಡಿರುವವರ ಆರೋಗ್ಯ ಸ್ಥಿತಿ ಸೇರಿದಂತೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. ಈ ಅಪಘಾತದ ಕುರಿತು ಪೊಲೀಸರು ತನಿಖೆಗೆ ಚಾಲನೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News