×
Ad

ಉತ್ತರ ಪ್ರದೇಶ: ವೃದ್ಧನಿಗೆ ಎಂಜಲು ನೆಕ್ಕುವಂತೆ ಬಲವಂತಪಡಿಸಿ, ಬೂಟಿನ ಹಾರ ಹಾಕಿ ಮೆರವಣಿಗೆ

Update: 2023-12-09 16:03 IST

ಸಾಂದರ್ಭಿಕ ಚಿತ್ರ (PTI)

ಸಿದ್ಧಾರ್ಥ್ ನಗರ್ (ಉತ್ತರ ಪ್ರದೇಶ): 75 ವರ್ಷದ ವೃದ್ಧರೊಬ್ಬರಿಗೆ ಬಲವಂತವಾಗಿ ಬೂಟಿನ ಹಾರ ಹಾಕಿ, ತಾವೇ ಉಗುಳಿದ ಎಂಜಲನ್ನು ನೆಕ್ಕುವಂತೆ ಮಾಡಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಸಿದ್ಧಾರ್ಥ್ ನಗರ್ ನಲ್ಲಿ ನಡೆದಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಘಟನೆಯು ಗುರುವಾರ ನಡೆದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೊ ವೈರಲ್ ಆದ ನಂತರ ಘಟನೆಯು ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಸಂತ್ರಸ್ತ ವ್ಯಕ್ತಿಯನ್ನು ತಿಘರಾ ಗ್ರಾಮದ ಮೊಹಬ್ಬತ್ ಅಲಿ ಎಂದು ಗುರುತಿಸಲಾಗಿದ್ದು, ಆತನ ಮುಖಕ್ಕೆ ಮಸಿಯನ್ನೂ ಬಳಿಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನ ಪುತ್ರಿಯನ್ನು ಸಂತ್ರಸ್ತ ಅಲಿ ಅಸಭ್ಯವಾಗಿ ಸ್ಪರ್ಶಿಸಿದ ಎಂದು ವ್ಯಕ್ತಿಯೊಬ್ಬರು ದೂರು ನೀಡಿದ ನಂತರ ಈ ಘಟನೆಯು ನಡೆದಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಅಲಿಯನ್ನು ಅಪಮಾನಗೊಳಿಸಿದ ಘಟನೆಯಲ್ಲಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ಝಫರ್, ಅಮನ್ ಪಾಂಡೆ, ಅಖಿಲೇಶ್ ಸಾಹ್ನಿ ಹಾಗೂ ಘನಶ್ಯಾಮ್ ತಿವಾರಿ ಎಂದು ಗುರುತಿಸಲಾಗಿದೆ ಎಂದು ಗೊಲ್ಹೌರಾ ಪೊಲೀಸ್ ಠಾಣೆಯ ಠಾಣಾಧಿಕಾರಿ ಅಜಯ್ ನಾಥ್ ಕನ್ನೌಜಿಯ ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕನ್ನೌಜಿಯ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News