×
Ad

ಮಣಿಪಾಲ್ ಟೈಗರ್ಸ್ ಎಲ್‌ಎಲ್‌ಸಿ ಚಾಂಪಿಯನ್

Update: 2023-12-09 23:14 IST

ಮಣಿಪಾಲ್ ಟೈಗರ್ಸ್ ಲೆಜೆಂಡ್ಸ್ ಲೀಗ್ ಕ್ರಿಕೆಟ್ | Photo: @manipal_tigers \ X

ಸೂರತ್: ಅರ್ಬನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಫೈನಲ್ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ರೋಚಕವಾಗಿ ಮಣಿಸಿದ ಮಣಿಪಾಲ್ ಟೈಗರ್ಸ್ ಲೆಜೆಂಡ್ಸ್ ಲೀಗ್ ಕ್ರಿಕೆಟ್(ಎಲ್‌ಎಲ್‌ಸಿ)ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಸುರೇಶ್ ರೈನಾ ನಾಯಕತ್ವದ ಹೈದರಾಬಾದ್ ತಂಡವು ರಿಕ್ಕಿ ಕ್ಲಾರ್ಕ್(ಔಟಾಗದೆ 80) ಹಾಗೂ ಗುರುಕೀರತ್ ಸಿಂಗ್(64 ರನ್)ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತ್ತು.

ಗೆಲ್ಲಲು 188 ರನ್ ಗುರಿ ಬೆನ್ನಟ್ಟಿದ ಹರ್ಭಜನ್ ಸಿಂಗ್ ನೇತೃತ್ವದ ಮಣಿಪಾಲ್ ಟೈಗರ್ಸ್ ತಂಡ ಅಸೆಲಾ ಗುಣರತ್ನೆ(ಅಜೇಯ 51), ರಾಬಿನ್ ಉತ್ತಪ್ಪ(40 ರನ್) ಹಾಗೂ ಆಂಜೆಲೊ ಪೆರೇರ(30 ರನ್)ನೆರವಿನಿಂದ 19 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿ ಪ್ರಶಸ್ತಿ ಎತ್ತಿ ಹಿಡಿಯಿತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News