×
Ad

ಮಣಿಪುರ: ಶಂಕಿತ ಉಗ್ರರಿಂದ ಪೋಲಿಸ್ ಅಧಿಕಾರಿಯ ಹತ್ಯೆ

Update: 2023-10-31 21:41 IST

Photo : BJP4Manipur / X

ಇಂಫಾಲ: ಮಣಿಪುರದ ಮೊರೆಹ್ ನಲ್ಲಿ ಮಂಗಳವಾರ ಶಂಕಿತ ಉಗ್ರಗಾಮಿಗಳು ಪೋಲಿಸ್ ಅಧಿಕಾರಿಯೋರ್ವರನ್ನು ಗುಂಡಿಟ್ಟು ಹತ್ಯೆಗೈದಿದ್ದಾರೆ.

ಮೊರೆಹ್ ಉಪವಿಭಾಗೀಯ ಪೋಲಿಸ್ ಅಧಿಕಾರಿ (ಎಸ್ಪಿಡಿಒ) ಚಿಂಗ್ತಮ್ ಆನಂದ್ ಪಟ್ಟಣದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಹೆಲಿಪ್ಯಾಡ್ ಅನ್ನು ಪರಿಶೀಲಿಸುತ್ತಿದ್ದಾಗ ಉಗ್ರರು ಅವರ ಮೇಲೆ ಗುಂಡಿನ ದಾಳಿಯನ್ನು ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರು ಬಳಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಉಗ್ರರ ಬಂಧನಕ್ಕಾಗಿ ಪೋಲಿಸರು ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.

ಮಣಿಪುರ ಮುಖ್ಯಮಂತ್ರಿ ಎನ್.ಬೀರೇನ್ ಸಿಂಗ್ ಅವರು ಆನಂದ ಹತ್ಯೆಗೆ ತೀವ್ರ ದುಃಖವನ್ನು ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News