×
Ad

ಮಧ್ಯಪ್ರದೇಶ: ಲಿವ್-ಇನ್ ಸಂಬಂಧದಲ್ಲಿದ್ದ ಗೆಳತಿಯನ್ನು ಕೊಲೆ ಮಾಡಿ ಫ್ರಿಡ್ಜ್ ನಲ್ಲಿಟ್ಟ ವಿವಾಹಿತ!

Update: 2025-01-11 11:34 IST

Photo credit: NDTV

ಭೋಪಾಲ್ : ಮಧ್ಯಪ್ರದೇಶದ ದೇವಾಸ್ ನಗರದಲ್ಲಿ ವಿವಾಹಿತ ವ್ಯಕ್ತಿಯೋರ್ವ ಲಿವ್- ಇನ್ ಸಂಬಂಧದಲ್ಲಿದ್ದ ಗೆಳತಿಯನ್ನು ಕೊಲೆ ಮಾಡಿ ಆಕೆಯ ಮೃತದೇಹವನ್ನು 8 ತಿಂಗಳ ಕಾಲ ಫ್ರಿಡ್ಜ್ ನಲ್ಲಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಸಂಜಯ್ ಪಾಟಿದಾರ್ ಎಂಬಾತ ಈ ಕೃತ್ಯವನ್ನು ಎಸಗಿದ್ದು, ಸಂತ್ರಸ್ತೆಯನ್ನು ಪಿಂಕಿ ಪ್ರಜಾಪತಿ ಎಂದು ಗುರುತಿಸಲಾಗಿದೆ. ಸಂಜಯ್ ಬಾಡಿಗೆಗೆ ಪಡೆದಿದ್ದ ಮನೆಯ ಫ್ರಿಡ್ಜ್ ನಲ್ಲಿ ಸೀರೆಯುಟ್ಟು, ಆಭರಣ ಧರಿಸಿದ್ದ ಮಹಿಳೆಯ ಕೊಳೆತ ಮೃತದೇಹ ಪತ್ತೆಯಾಗಿದೆ. ಮೃತದೇಹದ ಕೈಗಳನ್ನು ಕತ್ತಿಗೆ ಕಟ್ಟಿಹಾಕಲಾಗಿತ್ತು.

ಕಳೆದ ಜೂನ್ ನಲ್ಲಿ ಕೊಲೆ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಉಜ್ಜಯಿನಿ ನಿವಾಸಿ ಸಂಜಯ್ ಪಾಟಿದಾರ್ ಕಳೆದ ಐದು ವರ್ಷಗಳಿಂದ ಪಿಂಕಿ ಪ್ರಜಾಪತಿ ಜೊತೆ ಲಿವ್- ಇನ್ ಸಂಬಂಧದಲ್ಲಿದ್ದು, ಆಕೆ ತನ್ನನ್ನು ವಿವಾಹವಾಗುವಂತೆ ಪಾಟಿದಾರ್ ಗೆ ಒತ್ತಾಯಿಸಿದ್ದಾಳೆ. ಇದರಿಂದಾಗಿ ಪಾಟಿದಾರ್ ತನ್ನ ಸ್ನೇಹಿತನ ಸಹಾಯದಿಂದ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.

ʼಯುವತಿಯನ್ನು ಜೂನ್ 2024ರಲ್ಲಿ ಕೊಲೆ ಮಾಡಿರುವ ಶಂಕೆಯಿದೆ. ಮನೆಯಿಂದ ದುರ್ವಾಸನೆ ಹೊರಬರಲು ಪ್ರಾರಂಭಿಸಿದ ಬಳಿಕ ನೆರೆಹೊರೆಯವರು ಮನೆಯ ಮಾಲಕರಿಗೆ ಮಾಹಿತಿ ನೀಡಿದ್ದಾರೆ. ಮಾಲಕ ಬಂದು ಪರಿಶೀಲನೆ ನಡೆಸಿದಾಗ ಮಹಿಳೆಯ ಮೃತದೇಹ ಫ್ರಿಡ್ಜ್ ನಲ್ಲಿ ಪತ್ತೆಯಾದ ಕಾರಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆʼ ಎಂದು ದೇವಾಸ್ ಪೊಲೀಸ್ ವರಿಷ್ಠಾಧಿಕಾರಿ ಪುನೀತ್ ಗೆಹ್ಲೋಟ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮೃತದೇಹ ಪತ್ತೆಯಾದ ಮನೆ ಇಂದೋರ್ ನಲ್ಲಿ ವಾಸಿಸುವ ಧೀರೇಂದ್ರ ಶ್ರೀವಾಸ್ತವ ಅವರ ಮಾಲಕತ್ವದಲ್ಲಿದೆ. ಜೂನ್ 2023ರಲ್ಲಿ ಪಾಟಿದಾರ್ ಈ ಮನೆಯನ್ನು ಬಾಡಿಗೆಗೆ ಪಡೆದುಕೊಂಡಿದ್ದ. ಇತ್ತೀಚೆಗೆ ಪಾಟಿದಾರ್ ಮನೆಯನ್ನು ಬಿಟ್ಟಿದ್ದ. ಆದರೆ ಆತನ ವಸ್ತುಗಳು ಅಲ್ಲೇ ಇದ್ದವು. ಪಾಟಿದಾರ್ ಮನೆಗೆ ಅಪರೂಪಕ್ಕೆ ಬಂದು ಹೋಗುತ್ತಿದ್ದ ಎಂದು ಪುನೀತ್ ಗೆಹ್ಲೋಟ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News