×
Ad

ಮಲಯಾಳಂ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಶ್ರೀನಿವಾಸನ್ ನಿಧನ

Update: 2025-12-20 09:43 IST

 (Photo | A Sanesh, EPS)

ಕೊಚ್ಚಿ: ಮಲಯಾಳಂ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಮತ್ತು ನಿರ್ಮಾಪಕ ಶ್ರೀನಿವಾಸನ್(69) ಶನಿವಾರ ನಿಧನರಾಗಿದ್ದಾರೆ.

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀನಿವಾಸನ್ ಅವರು ಉದಯಂಪೀರೂರಿನ ತನ್ನ ನಿವಾಸದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಆರೋಗ್ಯದಲ್ಲಿ ದಿಡೀರ್ ಏರುಪೇರು ಕಂಡು ಬಂದ ಬಳಿಕ ಅವರನ್ನು ತ್ರಿಪ್ಪುನಿತುರಾದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಶನಿವಾರ ಬೆಳಿಗ್ಗೆ ಅವರು ಮೃತಪಟ್ಟಿದ್ದಾರೆ.

ಕೇರಳದ ತಲಶ್ಶೇರಿ ಬಳಿಯ ಪಟ್ಯಂನಲ್ಲಿ 1956ರ ಏಪ್ರಿಲ್ 6 ರಂದು ಜನಿಸಿದ ಶ್ರೀನಿವಾಸನ್, ಕದಿರೂರಿನಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಆ ಬಳಿಕ ಮಟ್ಟನೂರಿನ ಪಿಆರ್‌ಎನ್ ಎಸ್‌ಎಸ್ ಕಾಲೇಜಿನಿಂದ ಅರ್ಥಶಾಸ್ತ್ರ ವಿಷಯದಲ್ಲಿ ಪದವಿ ಪಡೆದರು.

1977ರಲ್ಲಿ ಪಿ.ಎ. ಬ್ಯಾಕರ್ ಅವರ ʼಮಣಿಮುಳಕ್ಕಂʼ ಚಿತ್ರದ ಮೂಲಕ ಶ್ರೀನಿವಾಸನ್ ನಟನೆಗೆ ಪಾದಾರ್ಪಣೆ ಮಾಡಿದರು ಮತ್ತು ಮಲಯಾಳಂ ಚಿತ್ರರಂಗದ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರಾದರು. ಸುಮಾರು ಐದು ದಶಕಗಳ ಕಾಲ ಅವರು 225ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆಯನ್ನು ಮಾಡಿದ್ದಾರೆ.

ನಟ, ನಿರ್ಮಾಪಕ, ಬರಹಗಾರ ಮತ್ತು ಚಲನಚಿತ್ರ ನಿರ್ಮಾಪಕರಾಗಿ ಶ್ರೀನಿವಾಸನ್ ಅವರ ಕೊಡುಗೆ ಆಧುನಿಕ ಮಲಯಾಳಂ ಸಿನಿಮಾವನ್ನು ರೂಪಿಸಲು ಸಹಾಯ ಮಾಡಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News