ತಾಯಿ ಹಾಗೂ ನನ್ನನ್ನು ಗೃಹ ಬಂಧನದಲ್ಲಿರಿಸಲಾಗಿದೆ: ಮೆಹಬೂಬ ಮುಫ್ತಿ ಪುತ್ರಿ ಆರೋಪ
ಇಲ್ತಿಜಾ ಮುಫ್ತಿ | PC : PTI
ಶ್ರೀನಗರ: ನನ್ನನ್ನು ಹಾಗೂ ನನ್ನ ತಾಯಿಯನ್ನು ಗೃಹ ಬಂಧನದಲ್ಲಿರಿಸಲಾಗಿದೆ ಎಂದು ಶನಿವಾರ ಪಿಡಿಪಿ ನಾಯಕಿ ಇಲ್ತಿಜಾ ಮುಫ್ತಿ ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಇಲ್ತಿಜಾ ಮುಫ್ತಿ, “ನಾನು ಕಥುವಾಗೆ ತೆರಳಲು ಬಯಸಿದ್ದೆ ಹಾಗೂ ಬುಧವಾರ ಸೇನೆಯ ಗುಂಡಿನ ದಾಳಿಗೆ ಬಲಿಯಾದ ಟ್ರಕ್ ಚಾಲಕನ ಕುಟುಂಬವನ್ನು ಭೇಟಿ ಮಾಡಲು ಸೊಪೋರ್ ಗೆ ಭೇಟಿ ನೀಡಲು ಪಿಡಿಪಿಯ ಅಧ್ಯಕ್ಷೆ ಮೆಹಬೂಬ ಮುಫ್ತಿ ಯೋಜಿಸಿದ್ದರು” ಎಂದು ಬರೆದುಕೊಂಡಿದ್ದಾರೆ.
“ನನ್ನನ್ನು ಹಾಗೂ ನನ್ನ ತಾಯಿ ಇಬ್ಬರನ್ನೂ ಗೃಹ ಬಂಧನದಲ್ಲಿರಿಸಲಾಗಿದೆ. ಸೇನೆಯು ವಸೀಂ ಮೀರ್ ರನ್ನು ಗುಂಡಿಟ್ಟು ಹತ್ಯೆಗೈದ ಸೊಪೋರ್ ಗೆ ಭೇಟಿ ನೀಡಲು ನನ್ನ ತಾಯಿ ಮುಂದಾಗಿದ್ದರಿಂದ ನಮ್ಮ ಮನೆಯ ದ್ವಾರಗಳಿಗೆ ಬೀಗ ಹಾಕಲಾಗಿದೆ” ಎಂದು ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.
“ನಾನು ಮಖಾನ್ ದಿನ್ ರ ಕುಟುಂಬವನ್ನು ಭೇಟಿ ಮಾಡಲು ಕಥುವಾಗೆ ತೆರಳಲು ಬಯಸಿದ್ದೆ ಆದರೆ ನನಗೆ ಅಲುಗಾಡಲೂ ಅವಕಾಶ ನೀಡಿಲ್ಲ. ಚುನಾವಣೆಯ ನಂತರವೂ ಕಾಶ್ಮೀರದಲ್ಲಿ ಏನೂ ಬದಲಾವಣೆಯಾಗಿಲ್ಲ. ಈಗ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳುವುದೂ ಅಪರಾಧೀಕರಣವಾಗಿದೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.