×
Ad

ಮಣಿಪುರದಲ್ಲಿ ಇಂದಿನಿಂದ ಮೊಬೈಲ್ ಇಂಟರ್ ನೆಟ್ ಸೇವೆ ಪುನರಾರಂಭ: ಬಿರೇನ್ ಸಿಂಗ್

Update: 2023-09-23 12:33 IST

Photo: PTI

ಇಂಫಾಲ್: ಈಶಾನ್ಯ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಸ್ಫೋಟಗೊಂಡ ನಂತರ ಮೇ 3ರಂದು ಸ್ಥಗಿತಗೊಂಡಿದ್ದ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಶನಿವಾರದಿಂದ ಮರುಸ್ಥಾಪಿಸಲಾಗುವುದು ಎಂದು ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಹೇಳಿದ್ದಾರೆ.

ಇಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಂಗ್, "ನಕಲಿ ಸುದ್ದಿ, ಪ್ರಚಾರ ಮತ್ತು ದ್ವೇಷದ ಭಾಷಣಗಳ ಹರಡುವಿಕೆಯನ್ನು ಪರಿಶೀಲಿಸಲು ಸರಕಾರವು ಮೇ 3 ರಂದು ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿತ್ತು, ಆದರೆ ಪರಿಸ್ಥಿತಿ ಸುಧಾರಣೆಯೊಂದಿಗೆ, ಇಂದಿನಿಂದ ರಾಜ್ಯಾದ್ಯಂತ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಪುನಃಸ್ಥಾಪಿಸಲಾಗುತ್ತದೆ. "ಅಕ್ರಮ ವಲಸಿಗರ" ಸಮಸ್ಯೆ ಎದುರಿಸಲು ಸರಕಾರವು ಪ್ರಯತ್ನ ಮುಂದುವರಿಸುತ್ತದೆ ಹಾಗೂ ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಬೇಲಿ ಹಾಕುವ ಅಗತ್ಯವಿದೆ'' ಎಂದು ಒತ್ತಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News