×
Ad

ಹಸುಗೂಸಿನೆದುರೇ ತಾಯಿಯನ್ನು ಥಳಿಸಿ ಎಳೆದೊಯ್ದ ದುಷ್ಕರ್ಮಿಗಳು; ವೀಡಿಯೋ ವೈರಲ್‌ ಆದ ಬೆನ್ನಿಗೇ ಆರೋಪಿಗಳ ಬಂಧನ

Update: 2023-09-01 17:02 IST

Screengrab: Twitter/@ambedkariteIND

ಭೋಪಾಲ್‌: ಮಧ್ಯ ಪ್ರದೇಶದ ಸಾಗರ್‌ ನಗರದಲ್ಲಿ ಮಹಿಳೆಯೊಬ್ಬಳನ್ನು ಆಕೆಯ 5 ತಿಂಗಳು ಪ್ರಾಯದ ಮಗು ಮಲಗಿರುವಾಗಲೇ ಅಲ್ಲಿನ ಬಸ್‌ ನಿಲ್ದಾಣ ಪ್ರದೇಶದಲ್ಲಿ ಬರ್ಬರವಾಗಿ ಥಳಿಸಿ ಎಳೆದೊಯ್ಯುತ್ತಿರುವ ವೀಡಿಯೋ ಒಂದು ವೈರಲ್‌ ಆದ ಬೆನ್ನಿಗೇ ಪೊಲೀಸರು ಕ್ರಮಕೈಗೊಂಡು ಮೂವರನ್ನು ಬಂಧಿಸಿದ್ದಾರೆ.

ಮಹಿಳೆ ಮಾನಸಿಕ ಅಸ್ವಸ್ಥತೆ ಹೊಂದಿದ್ದಾಳೆಂದು ತಿಳಿಯಲಾಗಿದೆ. ಆಕೆಗೆ ಕೋಲಿನಿಂದ ಹೊಡೆದು ಆಕೆಯ ಮುಖಕ್ಕೆ ಒದೆಯುತ್ತಿರುವುದು ವೀಡಿಯೋದಲ್ಲಿ ಕಾಣಿಸುತ್ತದೆ.

ಬಂಧಿತರನ್ನು ಪ್ರವೀಣ್‌ ರಾಯ್ಕರ್‌ (26), ವಿಕ್ಕಿ ಯಾದವ್‌ (20) ಮತ್ತು ರಾಕೇಶ್‌ ಪ್ರಜಾಪತಿ (40) ಎಂದು ಗುರುತಿಸಲಾಗಿದೆ. ಬಂಧಿತರನ್ನು ರಸ್ತೆಯಲ್ಲಿಯೇ ಮೆರವಣಿಗೆ ಮಾಡಿ ನಂತರ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಘಟನೆ ಆಗಸ್ಟ್‌ 12-13ರ ರಾತ್ರಿ ನಡೆದಿತ್ತು. ಮಧ್ಯವಯಸ್ಕ ಮಹಿಳೆ ಬಸ್‌ ನಿಲ್ದಾಣದ ಕ್ಯಾಂಟೀನಿಗೆ ಹಾಲು ಖರೀದಿಸಲೆಂದು ಹೋದಾಗ ಈ ವ್ಯಕ್ತಿಗಳು ಆಕೆಯನ್ನು ಥಳಿಸಿದ್ದರು. ಆಗ ಆಕೆ ಅವರ ಬಳಿ “ಭೈಯ್ಯಾ, ಭೈಯ್ಯಾ” ಎನ್ನುತ್ತಾ ಹೊಡೆಯದಂತೆ ಗೋಗರೆಯುತ್ತಿರುವುದು ಹಾಗೂ ಆಕೆಯ ಮಗು ನೆಲದಲ್ಲಿ ಮಲಗಿರುವುದು ಕಾಣಿಸುತ್ತದೆ. ಸುತ್ತಲಿದ್ದ ಜನರು ಆಕೆಗೆ ಹೊಡೆಯದಂತೆ ಆರೋಪಿಗಳಿಗೆ ಸೂಚಿಸುತ್ತಿರುವುದೂ ಕಾಣಿಸುತ್ತದೆ.

ತನಿಖೆ ಮುಂದುವರಿಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News