ಕುಣಬಿ ಜಾತಿ ಪ್ರಮಾಣ ಪತ್ರ ಪಡೆದಿರುವ ಮುಸ್ಲಿಮರಿಗೂ ಒಬಿಸಿ ಮೀಸಲಾತಿ ದೊರೆಯಬೇಕು: ಮರಾಠ ಮೀಸಲು ಹೋರಾಟಗಾರ ಜಾರಂಗೆ ಪಾಟೀಲ್
Update: 2024-06-24 14:40 IST
ಜಾರಂಗೆ ಪಾಟೀಲ್ | PTI
ಮುಂಬೈ: ಕುಣಬಿ ಜಾತಿ ಪ್ರಮಾಣ ಪತ್ರ ಪಡೆದಿರುವ ಮುಸ್ಲಿಮರಿಗೂ ಒಬಿಸಿ ಮೀಸಲಾತಿ ದೊರೆಯಬೇಕು ಎಂಬ ಹೇಳಿಕೆ ನೀಡುವ ಮೂಲಕ ಮರಾಠ ಮೀಸಲಾತಿ ಹೋರಾಟಗಾರ ಜಾರಂಗೆ ಪಾಟೀಲ್ ಕುತೂಹಲ ಮೂಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಾರಂಗೆ ಪಾಟೀಲ್, ಮುಸ್ಲಿಮರಿಗೆ ಅನ್ಯಾಯವಾಗಬಾರದು. ಬಿಜೆಪಿ ನಾಯಕ ಪಾಶಾ ಪಟೇಲ್ ಅವರ ದಾಖಲೆಗಳ ಪ್ರಕಾರ, ಅವರು ಕುಣಬಿ ಪ್ರಮಾಣ ಪತ್ರ ಪಡೆದಿರುವುದು ಬಯಲಾಗಿದೆ ಎಂದು ಹೇಳಿದ್ದಾರೆ.
ಒಂದು ವೇಳೆ ಇಂತಹ ದಾಖಲೆಗಳಿದ್ದರೆ ಮುಸ್ಲಿಮರೂ ಕೂಡಾ ಒಬಿಸಿ ಮೀಸಲಾತಿ ಪಡೆಯಲೇಬೇಕು. ಅವರು ಹೇಗೆ ತಮ್ಮ ಹಕ್ಕಿನಿಂದ ವಂಚಿತರಾಗುತ್ತಾರೆ ಎಂಬುದನ್ನು ನಾನೂ ನೋಡುತ್ತೇನೆ ಎಂದು ಅವರು ಸವಾಲು ಹಾಕಿದ್ದಾರೆ.
ಸರಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮರಾಠರಿಗೆ ಮೀಸಲಾತಿ ಒದಗಿಸಬೇಕು ಎಂದು ಆಗ್ರಹಿಸಿ ಉಪವಾಸ ಸತ್ಯಾಗ್ರಹ ಸೇರಿದಂತೆ ಹಲವಾರು ಹೋರಾಟಗಳನ್ನು ಜಾರಂಗೆ ಪಾಟೀಲ್ ಕಳೆದ ಒಂದು ವರ್ಷದಿಂದ ನಡೆಸುತ್ತಾ ಬರುತ್ತಿದ್ದಾರೆ.