×
Ad

ತನ್ನ ವಿರುದ್ಧದ ಭ್ರಷ್ಟಾಚಾರ ಪ್ರಕರಣವನ್ನು ಲೇವಡಿ ಮಾಡಿದ ನೆತನ್ಯಾಹು

Update: 2025-12-05 21:06 IST

ಬೆಂಜಮಿನ್ ನೆತನ್ಯಾಹು | Photo Credit : NDTV 

ಜೆರುಸಲೇಂ, ಡಿ.5: ತನ್ನ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ವಿಚಾರಣೆ `ಬಗ್ಸ್ ಬನ್ನಿ (ಜನಪ್ರಿಯ ಕಾರ್ಟೂನ್ ಧಾರಾವಾಹಿ) ಪ್ರಹಸನವಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಲೇವಡಿ ಮಾಡಿದ್ದು ತಾನು ಸಲ್ಲಿಸಿರುವ ವಿವಾದಾತ್ಮಕ ಕ್ಷಮಾದಾನ ಕೋರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆಗೊಳಿಸಿರುವ ವೀಡಿಯೊದಲ್ಲಿ ನೆತನ್ಯಾಹು `ನ್ಯಾಯಾಲಯದಲ್ಲಿ ಮುಂದುವರಿದಿರುವ `ರಾಜಕೀಯ ಮೊಕದ್ದಮೆ'ಯ ವಿಚಾರಣೆಯು ತನ್ನನ್ನು ಬಲವಂತದಿಂದ ಪದಚ್ಯುತಗೊಳಿಸುವ ಉದ್ದೇಶ ಹೊಂದಿದ್ದು ತಾನು ಯಾವುದೇ ತಪ್ಪೆಸಗಿಲ್ಲ' ಎಂದಿದ್ದಾರೆ.

ರಾಜಕೀಯ ಪ್ರಭಾವಕ್ಕೆ ಪ್ರತಿಯಾಗಿ ಐಷಾರಾಮಿ ವಸ್ತುಗಳನ್ನು ಕೊಡುಗೆಯಾಗಿ ಪಡೆದಿರುವುದು ಹಾಗೂ ತನ್ನ ಪರವಾಗಿ ವರದಿಗಳನ್ನು ಪ್ರಕಟಿಸುವಂತೆ ಇಸ್ರೇಲ್‍ ನ ಎರಡು ಸುದ್ದಿಸಂಸ್ಥೆಗಳ ಮೇಲೆ ಪ್ರಭಾವ ಬೀರಿರುವ ಆರೋಪವನ್ನು ನೆತನ್ಯಾಹು ಎದುರಿಸುತ್ತಿದ್ದಾರೆ.

ಬಗ್ಸ್ ಬನ್ನಿ ಕಾರ್ಟೂನ್‍ ನ ಗೊಂಬೆಯನ್ನು ಕೈಯಲ್ಲಿ ಹಿಡಿದಿರುವ ವೀಡಿಯೋವನ್ನೂ ಪೋಸ್ಟ್ ಮಾಡಿರುವ ನೆತನ್ಯಾಹು `29 ವರ್ಷದ ಹಿಂದೆ ಮಗನಿಗಾಗಿ ಬಗ್ಸ್ ಬನ್ನಿಯನ್ನು ಕೊಡುಗೆಯಾಗಿ ಪಡೆದಿರುವುದಕ್ಕೆ ತನ್ನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ' ಎಂದು ಲೇವಡಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News