×
Ad

ಇಸ್ರೇಲ್ ಪ್ರಜೆಗಳಿಗೆ ಅಮೆರಿಕದ ನಿರ್ಬಂಧಕ್ಕೆ ನೆತನ್ಯಾಹು ಖಂಡನೆ

Update: 2024-02-03 21:54 IST

 ಬೆಂಜಮಿನ್ ನೆತನ್ಯಾಹು | Photo: NDTV 

ಟೆಲ್ಅವೀವ್: ಪಶ್ಚಿಮದಂಡೆಯಲ್ಲಿ ವಸಾಹತುಗಾರರ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಇಸ್ರೇಲ್ನ 4 ಪ್ರಜೆಗಳಿಗೆ ನಿರ್ಬಂಧ ವಿಧಿಸಿರುವ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ಕ್ರಮವನ್ನು ಖಂಡಿಸುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

ಇಂತಹ ಘಟನೆಗಳ ವಿರುದ್ಧ ಇಸ್ರೇಲ್ ಕ್ರಮ ಕೈಗೊಳ್ಳಲು ಬದ್ಧವಾಗಿರುವುದರಿಂದ ಅಮೆರಿಕದ ಅಸಾಧಾರಣ ಕ್ರಮಗಳು ಅನಗತ್ಯ ಎಂದವರು ಪ್ರತಿಪಾದಿಸಿದ್ದಾರೆ. ಪಶ್ಚಿಮದಂಡೆಯ ಜುಡಿಯಾ ಮತ್ತು ಸುಮಾರಿಯಾದ ಜನತೆ ಕಾನೂನನ್ನು ಗೌರವಿಸುವವರು ಹಾಗೂ ಅವರಲ್ಲಿ ಹೆಚ್ಚಿನವರು ಇಸ್ರೇಲ್ನ ರಕ್ಷಣೆಗಾಗಿ ಹೋರಾಡುವವರು, ಇಸ್ರೇಲ್ನ ಹಿತಾಸಕ್ತಿ, ಭದ್ರತೆಗೆ ಭಂಗ ತರುವ ಸಂಚುಕೋರರ ವಿರುದ್ಧ ಹೋರಾಡುವವರು. ವಿಶ್ವದ ಎಲ್ಲಿಯೇ ಆದರೂ, ಕಾನೂನು ಉಲ್ಲಂಘಿಸುವವ ಇಸ್ರೇಲಿ ಪ್ರಜೆಗಳನ್ನು ಇಸ್ರೇಲ್ ಆಡಳಿತ ಶಿಕ್ಷಿಸುತ್ತದೆ. ಆದ್ದರಿಂದ ಅಮೆರಿಕದ ಅಸಾಧಾರಣ ಕ್ರಮಕ್ಕೆ ಅರ್ಥವಿಲ್ಲ' ಎಂದು ನೆತನ್ಯಾಹು ಕಚೇರಿಯ ಹೇಳಿಕೆ ತಿಳಿಸಿದೆ.

ಪಶ್ಚಿಮದಂಡೆಯಲ್ಲಿ ಫೆಲೆಸ್ತೀನೀಯರನ್ನು ಗುರಿಯಾಗಿಸಿ ಹಿಂಸೆ ನಡೆಸುವ ಇಸ್ರೇಲಿಗಳನ್ನು ಶಿಕ್ಷಿಸುವ ಉದ್ದೇಶ ಹೊಂದಿರುವ ಕಾರ್ಯನಿರ್ವಾಹಕ ಆದೇಶವನ್ನು ಗುರುವಾರ ಅಮೆರಿಕ ಅಧ್ಯಕ್ಷ ಜೋ ಬೈಡನ್ ಜಾರಿಗೊಳಿಸಿದ್ದರು. ಫೆಲೆಸ್ತೀನೀಯರ ಮೇಲೆ ದಾಳಿ ಮಾಡುವ, ಬೆದರಿಸುವ, ಅಥವಾ ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳುವ ವ್ಯಕ್ತಿಗಳ ವಿರುದ್ಧ ಹಣಕಾಸಿನ ನಿರ್ಬಂಧಗಳು ಅಥವಾ ವೀಸಾ ನಿರ್ಬಂಧಗಳನ್ನು ವಿಧಿಸುವ ವ್ಯವಸ್ಥೆಯನ್ನು ಈ ಆದೇಶವು ಸ್ಥಾಪಿಸುತ್ತದೆ. `ಈ ಕ್ರಮವು ಇಸ್ರೇಲಿಗಳು ಮತ್ತು ಫೆಲೆಸ್ತೀನೀಯರಿಗೆ ಸಮಾನವಾಗಿ ಶಾಂತಿ ಮತ್ತು ಭದ್ರತೆಯನ್ನು ಉತ್ತೇಜಿಸಲು ಪ್ರಯತ್ನಿಸುತ್ತವೆ' ಎಂದು ಶ್ವೇತಭವನದ ವಕ್ತಾರರು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News