×
Ad

ದಂಡಸಂಹಿತೆಗಳನ್ನು ಬದಲಿಸುವ ನೂತನ ವಿಧೇಯಕಗಳು ಶೀಘ್ರವೇ ಅಂಗೀಕಾರ: ಅಮಿತ್ ಶಾ

Update: 2023-10-27 23:26 IST

Photo- PTI

ಹೈದರಾಬಾದ್: ಭಾರತೀಯ ದಂಡಸಂಹಿತೆ (ಐಪಿಸಿ), ಕ್ರಿಮಿನಲ್ ಅಪರಾಧ ಸಂಹಿತೆ(ಸಿಆರ್‌ಪಿಸಿ) ಹಾಗೂ ಸಾಕ್ಷಿ ಕಾಯ್ದೆಯನ್ನು ತೆರವುಗೊಳಿಸುವ ನೂತನ ವಿಧೇಯಕಗಳನ್ನು ಶೀಘ್ರದಲ್ಲೇ ಲೋಕಸಭೆ ಅಂಗೀಕರಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಡಿಯಲ್ಲಿ ಭಾರತವು ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅಳವಡಿಸಿಕೊಂಡಿದೆ ಎಂದವರು ಹೇಳಿದ್ದಾರೆ.

ಹೈದರಾಬಾದ್‌ನ ಸರದಾರ ವಲ್ಲಭಬಾಯ್ ಪಟೇಲ್ ರಾಷ್ಟ್ರೀಯ ಅಕಾಡಮಿಯಲ್ಲಿ ಐಪಿಎಸ್ ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳ 75ನೇ ಬ್ಯಾಚ್‌ನ ಪಥಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬ್ರಿಟಿಶ್ ಆಡಳಿತದ ಕಾಲದಲ್ಲಿ ಮಾಡಲಾದ ಕಾನೂನುಗಳನ್ನು ಭಾರತವು ತೊಡೆದುಹಾಕುತ್ತಿದೆ ಹಾಗೂ ನೂತನ ಭರವಸೆ ಹಾಗೂ ನೂತನ ಆಶಾವಾದದ ಹೊಸ ಯುಗವನ್ನು ಪ್ರವೇಶಿಸುತ್ತಿದೆ ಎಂದವರು ಹೇಳಿದರು.

‘‘ನಮ್ಮ ಕ್ರಿಮಿನಲ್ ನ್ಯಾಯಾಂಗ ವ್ಯವಸ್ಥೆಯ ಹಿಂದಿರುವ ಚಾಲಕಶಕ್ತಿಗಳಾದ ಐಪಿಸಿ, ಸಿಆರ್‌ಪಿಸಿ ಹಾಗೂ ಸಾಕ್ಷಿ ಕಾಯ್ದೆಗಳನ್ನು ಬ್ರಿಟಿಶ್ ಆಳ್ವಿಕೆಯ ಯುವಾದ 1850ರಲ್ಲಿ ರಚಿಸಲಾಗಿತ್ತು. ಇದೀಗ ಈ ಮೂರು ಕಾನೂನುಗಳಲ್ಲಿ ಕೇಂದ್ರಸರಕಾರವು ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡಿದ್ದು,ಅವು ಜಾಗದಲ್ಲಿ ಜಾರಿಗೆ ತರಲುದ್ದೇಶಿಸಿರುವ ನೂತನ ಕಾನೂನುಗಳನ್ನು ದೇಶದ ಸಂಸತ್‌ನ ಮುಂದೆ ಮಂಡಿಸಲಾಗುವುದು’’ ಎಂದರು.

ಕೇಂದ್ರ ಗೃಹಸಚಿವಾಲಯದ ಸಂಸದೀಯ ಸಮಿತಿಯು ಅದನ್ನು ಪರಿಶೀಲಿಸುತ್ತಿದ್ದು, ಶೀಘ್ರದಲ್ಲೇ ಅವುಗಳನ್ನು ಜಾರಿಗೊಳಿಸಲಾಗುವುದು ಎಂಬ ಭರವಸೆಯನ್ನು ಅಮಿತ್ ಶಾ ವ್ಯಕ್ತಪಡಿಸಿದರು.

‘‘ಸರಕಾರದ ಸುರಕ್ಷತೆಯು ಹಳೆಯ ಕಾನೂನುಗಳ ಉದ್ದೇಶವಾಗಿದ್ದರೆ, ಸಾರ್ವಜನಿಕರ ಹಕ್ಕುಗಳನ್ನು ಸಂರಕ್ಷಿಸುವುದು ಹಾಗೂ ಜನತೆಗೆ ಈ ಹಕ್ಕುಗಳನ್ನು ಪಡೆದುಕೊಳ್ಳಲು ಇರುವ ಅಡ್ಡಿಗಳನ್ನು ನಿವಾರಿಸುವುದು ನೂತನ ಕಾನೂನುಗಳ ಉದ್ದೇಶವೆಂದವರು ಹೇಳಿದರು.

ಇಂದು ತೇರ್ಗಡಗೊಂಡಿರುವ ಬ್ಯಾಚ್‌ನ ಐಪಿಎಸ್ ಅಧಿಕಾರಿಗಳು ಅದೃಷ್ಟವಂತರಾಗಿದ್ದು, ಅವರಿಗೆಈ ನೂತನ ಕಾನೂನುಗಳನ್ನು ಮಾತು ಹಾಗೂ ಕೃತಿಯಲ್ಲಿ ಅನುಷ್ಠಾನಗೊಳಿಸುವ ಸುಯೋಗ ದೊರೆಯಲಿದೆ ಎಂದವರು ಹೇಳಿದರು.

ನೂತನ ಕಾನೂನಿನಲ್ಲಿ ಭಯೋತ್ಪಾದನೆ ಹಾಗೂ ಸಂಘಟಿತ ಅಪರಾಧಗಳ ಬಗ್ಗೆ ಮರು ವ್ಯಾಖ್ಯಾನವನ್ನು ಮಾಡಲಾಗಿದೆ ಹಾಗೂ ಅಂತರ್ ರಾಜ್ಯ ಗ್ಯಾಂಗ್‌ಗಳನ್ನು ನಿರ್ಮೂಲಗೊಳಿಸಲು ಹಲವಾರು ನಿಯಮಗಳನ್ನು ರೂಪಿಸಲಾಗಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News