×
Ad

ನೂತನ ಆದಾಯ ತೆರಿಗೆ ಮಸೂದೆ 2025 | ಜು.21ರಂದು ಲೋಕಸಭೆಯಲ್ಲಿ ಸಂಸದೀಯ ಸಮಿತಿ ವರದಿ ಮಂಡನೆ

Update: 2025-07-20 21:08 IST

ವಿತ್ತಸಚಿವೆ ನಿರ್ಮಲಾ ಸೀತಾರಾಮನ್

ಹೊಸದಿಲ್ಲಿ,ಜು.20: ಆರು ದಶಕಗಳಷ್ಟು ಹಳೆಯ ಆದಾಯ ತೆರಿಗೆ ಕಾಯ್ದೆಯ ಬದಲು ನೂತನ ಆದಾಯ ತೆರಿಗೆ ಮಸೂದೆ 2025ನ್ನು ಪರಿಶೀಲಿಸಲು ರಚಿಸಲಾಗಿದ್ದ ಸಂಸದೀಯ ಸಮಿತಿಯ ವರದಿಯನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾಗುವುದು.

ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ.13ರಂದು ಲೋಕಸಭೆಯಲ್ಲಿ ಮಂಡಿಸಿದ್ದ ನೂತನ ಆದಾಯ ತೆರಿಗೆ ಮಸೂದೆ, 2025ನ್ನು ಪರಿಶೀಲಿಸಲು ಬಿಜೆಪಿ ನಾಯಕ ಬೈಜಯಂತ್ ಪಾಂಡಾ ಅವರ ಅಧ್ಯಕ್ಷತೆಯಲ್ಲಿ 31 ಸದಸ್ಯರ ಸಮಿತಿಯನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ರಚಿಸಿದ್ದರು.

ಸಮಿತಿಯು 285 ಸಲಹೆಗಳನ್ನು ನೀಡಿದ್ದು, ಜು.16ರಂದು ನಡೆದ ತನ್ನ ಸಭೆಯಲ್ಲಿ ನೂತನ ಆದಾಯ ತೆರಿಗೆ ಮಸೂದೆ,2025 ಕುರಿತು ವರದಿಯನ್ನು ಅಂಗೀಕರಿಸಿದೆ. ಇದನ್ನು ಈಗ ಮುಂದಿನ ಕ್ರಮಕ್ಕಾಗಿ ಸದನದಲ್ಲಿ ಮಂಡಿಸಲಾಗುತ್ತದೆ.

ಸರಳಗೊಳಿಸಲಾಗಿರುವ ಆದಾಯ ತೆರಿಗೆ ಮಸೂದೆಯು ಗಾತ್ರದಲ್ಲಿ 1961ರ ಆದಾಯ ತೆರಿಗೆ ಕಾಯ್ದೆಯ ಅರ್ಧದಷ್ಟಿದ್ದು,ಮೊಕದ್ದಮೆಗಳು ಮತ್ತು ಹೊಸ ವ್ಯಾಖ್ಯಾನಗಳ ವ್ಯಾಪ್ತಿಯನ್ನು ಕನಿಷ್ಠಗೊಳಿಸುವ ಮೂಲಕ ತೆರಿಗೆ ಖಚಿತತೆಯನ್ನು ಸಾಧಿಸಲು ಉದ್ದೇಶಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News