×
Ad

ಸೆಮಿಕಂಡಕ್ಟರ್‌, ಚಿಪ್‌ ಕೊರತೆಯಿಂದ ಅಗತ್ಯ ಇವಿಎಂ ತರಿಸಲು ಚುನಾವಣಾ ಆಯೋಗಕ್ಕೆ ಸಮಸ್ಯೆ: ವರದಿ

Update: 2023-10-23 16:27 IST

ಸಾಂದರ್ಭಿಕ ಚಿತ್ರ (PTI) 

ಹೊಸದಿಲ್ಲಿ: ದೇಶದಲ್ಲಿ ಸದ್ಯ ಇವಿಎಂಗಳಿಗೆ ಅಗತ್ಯವಿರುವ ಸೆಮಿಕಂಡಕ್ಟರ್‌ಗಳು ಮತ್ತು ಚಿಪ್‌ಗಳ ಕೊರತೆಯನ್ನು ಪರಿಗಣಿಸಿದರೆ ಏಕಕಾಲದಲ್ಲಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ನಡೆಸಲು ಅಗತ್ಯವಿರುವ ಸಲಕರಣೆಗಳು ಸಿದ್ಧಗೊಳ್ಳಲು ಕನಿಷ್ಠ ಒಂದು ವರ್ಷ ಬೇಕಾದೀತೆಂದು ಹೇಳಲಾಗುತ್ತಿದೆ ಎಂದು Indian Express ವರದಿ ಮಾಡಿದೆ.

ರಷ್ಯಾ-ಉಕ್ರೇನ್‌ ಯುದ್ಧ ಹಾಗೂ ಕೋವಿಡ್‌ ಸಾಂಕ್ರಾಮಿಕದಿಂದ ಸೆಮಿ-ಕಂಡಕ್ಟರ್‌ಗಳ ಕೊರತೆಯು ಇವಿಎಂ ಪೂರೈಕೆಯ ಸಮಯಾವಧಿಯನ್ನು ಇನ್ನಷ್ಟು ವಿಸ್ತರಿಸಿದೆ.

ವಿವಿಪ್ಯಾಟ್‌ ಯಂತ್ರಗಳಿಗೂ ಸೆಮಿಕಂಡಕ್ಟರ್‌ಗಳು ಮತ್ತು ಚಿಪ್‌ಗಳ ಅಗತ್ಯವಿದೆ.

ಸೆಮಿಕಂಡಕ್ಟರ್‌ ಕೊರತೆಯಿಂದಾಗಿ ಇವಿಎಂ ತರಿಸುವ ನಿಟ್ಟಿನಲ್ಲಿ ಮೀಸಲಿರಿಸಲಾದ ನಿಧಿಯ ಶೇ 80ರಷ್ಟನ್ನೂ ಬಳಸಲು ತನಗೆ ಸಾಧ್ಯವಾಗಿಲ್ಲ ಎಂದು ಚುನಾವಣಾ ಆಯೋಗ ಸಂಸದೀಯ ಸ್ಥಾಯಿ ಸಮಿತಿಗೆ ತಿಳಿಸಿದೆ.

ದೇಶದಲ್ಲಿ ಏಕಕಾಲದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ನಡೆಸುವ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಲು ಸರ್ಕಾರ ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ನೇತೃತ್ವದಲ್ಲಿ ರಚಿಸಿದ ಎಂಟು ಸದಸ್ಯರ ಸಮಿತಿಗೆ ಕೂಡ ಚುನಾವಣಾ ಆಯೋಗ ಮೇಲಿನ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News