×
Ad

ಅಗತ್ಯ ವಸ್ತುಗಳ ಮೇಲೆ ಆರೋಗ್ಯ, ರಾಷ್ಟ್ರೀಯ ಭದ್ರತಾ ಸೆಸ್ ವಿಧಿಸಲಾಗುವುದಿಲ್ಲ: ನಿರ್ಮಲಾ ಸೀತಾರಾಮನ್ ಸ್ಪಷ್ಟನೆ

"ಆರೋಗ್ಯಕ್ಕೆ ಅಪಾಯವನ್ನುಂಟು ಮಾಡಬಲ್ಲ ಸರಕುಗಳ ಮೇಲೆ ಮೇಲ್ತೆರಿಗೆ ವಿಧಿಸುವುದೇ ಮಸೂದೆಯ ಉದ್ದೇಶ"

Update: 2025-12-04 21:48 IST

 ನಿರ್ಮಲಾ ಸೀತಾರಾಮನ್ | Photo Credit : PTI 

ಹೊಸದಿಲ್ಲಿ: ಪ್ರಸ್ತಾವಿತ ಆರೋಗ್ಯ ಹಾಗೂ ರಾಷ್ಟ್ರೀಯ ಭದ್ರತಾ ಮೇಲ್ತೆರಿಗೆ (ಸೆಸ್)ಯನ್ನು ಅಗತ್ಯ ವಸ್ತುಗಳ ಮೇಲೆ ವಿಧಿಸಲಾಗುವುದಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಲೋಕಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಆದರೆ ಆರೋಗ್ಯಕ್ಕೆ ಹಾನಿಕರವಾದ ಉತ್ಪನ್ನಗಳನ್ನು ತಯಾರಿಸುವ ಪಾನ್‌ಮಸಾಲ ಘಟಕಗಳಿಗೆ ಅವುಗಳ ಉತ್ಪಾದನಾ ಸಾಮರ್ಥ್ಯವನ್ನು ಆಧರಿಸಿ ಸೆಸ್ ಅನ್ನು ವಿಧಿಸಲಾಗುವುದು ಎಂದವರು ತಿಳಿಸಿದ್ದಾರೆ.

ಸದನದಲ್ಲಿ ಆರೋಗ್ಯ ಭದ್ರತಾ ಹಾಗೂ ರಾಷ್ಟ್ರೀಯ ಭದ್ರತಾ ಸೆಸ್ ಮಸೂದೆ 2025 ಅನ್ನು ಮಂಡಿಸಿ ಮಾತನಾಡಿದ ಅವರು, ಆರೋಗ್ಯಕ್ಕೆ ಗಣನೀಯವಾದ ಅಪಾಯವನ್ನುಂಟು ಮಾಡಬಲ್ಲ ಸರಕುಗಳ ಮೇಲೆ ಮೇಲ್ತೆರಿಗೆ ವಿಧಿಸುವುದೇ ಈ ಮಸೂದೆಯ ಉದ್ದೇಶವಾಗಿದೆ ಎಂದರು. ಜನತೆ ಆರೋಗ್ಯಕ್ಕೆ ಹಾನಿಕರವಾದ ಉತ್ಪನ್ನಗಳ ಬಳಕೆಗೆ ಹಿಂದೇಟು ಹಾಕುವಂತೆ ಮಾಡಲು ಈ ಸೆಸ್ ಅನ್ನು ವಿಧಿಸಲಾಗುತ್ತದೆ ಎಂದರು.

ಪ್ರತಿಯೊಂದು ಪಾನ್ ಮಸಾಲಾ ಕಾರ್ಖಾನೆಗೆ ಅದರ ಉತ್ಪಾದನಾ ಸಾಮರ್ಥ್ಯವನ್ನು ಆಧರಿಸಿ ವಿಭಿನ್ನ ದರದ ಸೆಸ್ ವಿಧಿಸಲಾಗುವುದು.ಈ ಸೆಸ್‌ನಿಂದ ಸಂಗ್ರಹವಾಗುವ ಆದಾಯದ ಒಂದು ಭಾಗವನ್ನು ಆರೋಗ್ಯ ಜಾಗೃತಿ ಅಥವಾ ಇತರ ಆರೋಗ್ಯ ಸಂಬಂಧಿತ ಯೋಜನೆಗಳು ಮತ್ತು ಚಟುವಟಿಕೆಗಳಿಗಾಗಿ ರಾಜ್ಯ ಸರಕಾರದ ಜೊತೆ ಹಂಚಿಕೊಳಳಲಾಗುವುದು ಎಂದು ನಿರ್ಮಲಾ ಅವರು ತಿಳಿಸಿದರು.

ಪಾನ್ ಮಸಾಲಾದ ಖರೀದಿ ಪ್ರಮಾಣವನ್ನು ಆಧರಿಸಿ ಅವುಗಳ ಮೇಲೆ ಗರಿಷ್ಠ ಶೇ.40ರಷ್ಟು ಜಿಎಸ್‌ಟಿಯನ್ನು ವಿಧಿಸಲಾಗುತ್ತದೆ. ಆದರೆ ಈ ಮೇಲ್ತೆರಿಗೆಯಿಂದ , ಜಿಎಸ್‌ಟಿ ಆದಾಯದ ಮೇಲೆ ಯಾವುದೇ ಪರಿಣಾಮವುಂಟಾಗುವುದಿಲ್ಲವೆಂದು ನಿರ್ಮಲಾ ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News