×
Ad

ಪಾದ್ರಿಯ ಭರವಸೆ ಬಳಿಕ ಬಿಜೆಪಿಯ ಬಗ್ಗೆ ಸಿಟ್ಟಿಲ್ಲ: ಪುತ್ರನ ಬಿಜೆಪಿ ಸೇರ್ಪಡೆ ಕುರಿತು ಎ.ಕೆ.ಆ್ಯಂಟನಿ ಪತ್ನಿಯ ಪ್ರತಿಕ್ರಿಯೆ

Update: 2023-09-25 21:55 IST

Anil Antony joining the BJP , Piyush Goyal,V. Muraleedharan | PTI

ಹೊಸದಿಲ್ಲಿ: ವಂಶಪಾರಂಪರ್ಯ ರಾಜಕಾರಣದ ವಿರುದ್ಧ ಕಾಂಗ್ರೆಸ್ ನಿಯಮ ಮಾಡಿದ್ದರಿಂದ ತಮ್ಮ ಪುತ್ರ ಅನಿಲ್ ಆ್ಯಂಟನಿ ಎಪ್ರಿಲ್ ತಿಂಗಳಿನಲ್ಲಿ ಬಿಜೆಪಿ ಸೇರ್ಪಡೆಯಾದ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎ.ಕೆ.ಆ್ಯಂಟನಿ ಅವರ ಪತ್ನಿ ಎಲಿಝಬೆತ್ ಆ್ಯಂಟನಿ ಪ್ರತಿಕ್ರಿಯಿಸಿದ್ದಾರೆ.

ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿರುವ ಸಂದರ್ಶನದ ವಿಡಿಯೊವೊಂದರಲ್ಲಿ ಸ್ಥಳೀಯ ಪಾದ್ರಿಯೊಬ್ಬರು ತಮ್ಮ ಪುತ್ರನ ನಿರ್ಧಾರವನ್ನು ಒಪ್ಪಿಕೊಳ್ಳುವಂತೆ ಮಾಡಲು ನೆರವು ನೀಡಿದರು ಎಂದೂ ಅವರು ಹೇಳಿರುವುದು ದಾಖಲಾಗಿದೆ ಎಂದು theprint.in ವರದಿ ಮಾಡಿದೆ.

“ನಾನು ಪಾದ್ರಿ ಜೋಸೆಫ್ ಅವರ ಬಳಿಗೆ ತೆರಳಿದ್ದೆ. “ಆತನನ್ನು ಮರಳಿ ಬರುವಂತೆ ಪ್ರಾರ್ಥಿಸಬೇಡ. ಆತನಿಗೆ ಅಲ್ಲಿ ಉತ್ತಮ ಭವಿಷ್ಯವಿದೆ” ಎಂದು ಅವರು ನನಗೆ ತಿಳಿಸಿದರು. ಆ ಮಾತು ನನ್ನ ಮನಸ್ಸನ್ನು ಪ್ರಶಾಂತವಾಗಿಸಿತು. ಆ ಮಾತನ್ನು ಕೇಳಿ ಬಿಜೆಪಿ ಪಕ್ಷದ ಬಗ್ಗೆ ನನಗಿದ್ದ ಎಲ್ಲ ಕೋಪ, ಪೂರ್ವನಿರ್ಧಾರಗಳು ಮಾಯವಾದವು. ಆ ಕ್ಷಣದಲ್ಲಿ ನನ್ನ ಹೃದಯವನ್ನು ಅವರ ಮಾತುಗಳು ತುಂಬಿಕೊಂಡವು” ಎಂದು ಎಲಿಝಬೆತ್ ಆ್ಯಂಟನಿ ಹೇಳಿದ್ದಾರೆ.

ಈ ವರ್ಷದ ಆರಂಭದಲ್ಲಿ ಎ.ಕೆ.ಆ್ಯಂಟನಿ ಅವರ ಪುತ್ರ ಅನಿಲ್ ಆ್ಯಂಟನಿ ಬಿಜೆಪಿ ಸೇರ್ಪಡೆಯಾಗಿದ್ದರು. ಅವರನ್ನು ಬಿಜೆಪಿ ಪಕ್ಷದ ರಾಷ್ಟ್ರೀಯ ವಕ್ತಾರನನ್ನಾಗಿ ನೇಮಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News