×
Ad

ಡಿಸೆಂಬರ್ 24ರ ನಂತರ ಒಂದು ಗಂಟೆಯೂ ಸಮಯ ನೀಡುವುದಿಲ್ಲ: ಮರಾಠಾ ಮೀಸಲಾತಿ ಜಾರಿಗೆ ಕಾಲಮಿತಿ ವಿಸ್ತರಣೆಗೆ ಜರಂಗೆ ಪಾಟೀಲ್ ನಿರಾಕರಣೆ

Update: 2023-12-17 19:54 IST

Photo: ಮನೋಜ್ ಜರಂಗೆ ಪಾಟೀಲ್(PTI)

ಮುಂಬೈ: "24 ಡಿಸೆಂಬರ್ 2023 ರ ನಂತರ ನಾವು ಒಂದು ಗಂಟೆಯೂ ನೀಡುವುದಿಲ್ಲ. ಅದರೊಳಗೆ ಮರಾಠರಿಗೆ ಮೀಸಲಾತಿಯನ್ನು ಖಾತ್ರಿಪಡಿಸುತ್ತೇವೆ" ಎಂದು ಮರಾಠ ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವ ಶಿವಬಾ ಸಂಘಟನೆಯ ಸಂಸ್ಥಾಪಕ ಮನೋಜ್ ಜರಂಗೆ ಪಾಟೀಲ್ ಹೇಳಿದ್ದಾರೆ ಎಂದು deccanherald ವರದಿ ಮಾಡಿದೆ.

ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಅಂಬಾಡ್ ತಾಲೂಕಿನ ಅಂತರವಾಲಿ ಸಾರಥಿ ಗ್ರಾಮದಲ್ಲಿ ಮರಾಠಾ ಮೀಸಲಾತಿಯ ಬೇಡಿಕೆಯ ಮುಂದಾಳತ್ವ ವಹಿಸಿದ ತಂಡದ ಸಭೆಯ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ತೀವ್ರ ಬೆಳವಣಿಗೆಗಳ ನಡುವೆ, ಮಹಾರಾಷ್ಟ್ರ ಸರ್ಕಾರ ನೇಮಿಸಿದ ಸಮಿತಿಯು ಮರಾಠ ಸಮುದಾಯಕ್ಕೆ ಸಂಬಂಧಿಸಿದ ಹಳೆಯ ದಾಖಲೆಗಳಲ್ಲಿ ಕುಂಬಿ ಎಂಬ ಪದವನ್ನು ಉಲ್ಲೇಖಿಸಿರುವ 54 ಲಕ್ಷ ಪ್ರಕರಣಗಳನ್ನು ಕಂಡುಹಿಡಿದಿದೆ ಎಂದರು.

ಗ್ರಾಮೀಣಾಭಿವೃದ್ಧಿ ಸಚಿವ ಗಿರೀಶ್ ಮಹಾಜನ್ ಮತ್ತು ಉದ್ಯೋಗ ಖಾತ್ರಿ ಯೋಜನೆ ಸಚಿವ ಸಂದೀಪನ್ ಭೂಮಾರೆ, ಮನೋಜ್ ಜರಂಗೆ ಪಾಟೀಲ್ ಅವರನ್ನು ಶನಿವಾರ ಭೇಟಿ ಮಾಡಿ ಮೀಸಲಾತಿ ವಿಚಾರದಲ್ಲಿ ಸರ್ಕಾರದ ಕ್ರಮಗಳ ಬಗ್ಗೆ ವಿವರಿಸಿದ್ದರು. ಮೀಸಲಾತಿ ಜಾರಿಗೆ ಕಾಲಮಿತಿಯನ್ನು ವಿಸ್ತರಿಸುವಂತೆ ಕೋರಿದ್ದರು. ಆ ಬಳಿಕ ಜರಂಗೆ ಪಾಟೀಲ್ ಮೀಸಲಾತಿ ಜಾರಿಗೆ ಗಡುವು ನೀಡಿ ಹೇಳಿಕೆ ನೀಡಿದ್ದಾರೆ.

ಕುಂಬಿ ಜಾತಿ ಪ್ರಮಾಣ ಪತ್ರ ನೀಡುವ ವಿಧಾನವನ್ನು ಮತ್ತು ದಾಖಲೆಗಳನ್ನು ಪರಿಶೀಲಿಸಲು ನಿವೃತ್ತ ನ್ಯಾಯಮೂರ್ತಿ ಸಂದೀಪ್ ಶಿಂಧೆ ನೇತೃತ್ವದ ಸಮಿತಿಯು ಕಂಬಳಿ ಮೀಸಲಾತಿ ನಿರ್ಧರಿಸಿದೆ. ಆದ್ದರಿಂದ ಈ ಕುರಿತ ರಾಜ್ಯದ ಕ್ಯುರೇಟಿವ್ ಅರ್ಜಿ ಸುಪ್ರೀಂ ಕೋರ್ಟ್‌ನ ಬಾಕಿ ಉಳಿದಿದೆ ಎಂದು ಸರ್ಕಾರ ಮನೋಜ್ ಅವರಿಗೆ ತಿಳಿಸಿದೆ ಎನ್ನಲಾಗಿದೆ.

ಮರಾಠರ ಉಪಜಾತಿಯಾದ ಕುಂಬಿ ಸಮುದಾಯವು ಒಬಿಸಿ ವರ್ಗದಲ್ಲಿ ಮೀಸಲಾತಿಗೆ ಅರ್ಹರಾಗಿರುತ್ತಾರೆ, ಆದಾಗ್ಯೂ, ಕೆಲವರು ಈ ಕ್ರಮದ ವಿರುದ್ಧ ಭಿನ್ನಾಭಿಪ್ರಾಯ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News