ವಂದೇ ಭಾರತ್ ರೈಲುಗಳ ಜನಪ್ರಿಯತೆ ನಿರಂತರವಾಗಿ ಹೆಚ್ಚುತ್ತಿದೆ: ಪ್ರಧಾನಿ ಮೋದಿ
ಸಾಂದರ್ಭಿಕ ಚಿತ್ರ| Photo: PTI
ಹೊಸದಿಲ್ಲಿ: ಭಾರತೀಯ ರೈಲ್ವೇಯನ್ನು ಆಧುನೀಕರಣಗೊಳಿಸಲು ಈ ಹಿಂದೆ ಹೆಚ್ಚಿನ ಗಮನ ನೀಡದಿರುವುದು ದುರದೃಷ್ಟಕರ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅದರ ಪರಿವರ್ತನೆಗಾಗಿ ತಮ್ಮ ಸರ್ಕಾರ ಶ್ರಮಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
11 ರಾಜ್ಯಗಳ ಧಾರ್ಮಿಕ ಮತ್ತು ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ಒಂಬತ್ತು ವಂದೇ ಭಾರತ್ ರೈಲುಗಳನ್ನು ಉದ್ಘಾಟಿಸುವ ಮುನ್ನ ಪ್ರಧಾನಿ ಮೋದಿ ಮಾಡಿದ ಭಾಷಣದಲ್ಲಿ ಈ ಹೇಳಿಕೆಗಳನ್ನು ನೀಡಿದರು.
ಈ ರೈಲುಗಳು ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಬಿಹಾರ, ಪಶ್ಚಿಮ ಬಂಗಾಳ, ಕೇರಳ, ಒಡಿಶಾ, ಜಾರ್ಖಂಡ್ ಮತ್ತು ಗುಜರಾತ್ ರಾಜ್ಯಗಳಲ್ಲಿ ವೇಗದ ಸಂಪರ್ಕವನ್ನು ಕಲ್ಪಿಸುತ್ತದೆ.
ನಮ್ಮ ಸರ್ಕಾರ ಮಾಡುತ್ತಿರುವ ಮೂಲಸೌಕರ್ಯ ಅಭಿವೃದ್ಧಿಯ ವೇಗ ಮತ್ತು ಪ್ರಮಾಣವು 140 ಕೋಟಿ ಭಾರತೀಯರ ಆಕಾಂಕ್ಷೆಗಳಿಗೆ ಹೊಂದಿಕೆಯಾಗುತ್ತಿದೆ. ವಂದೇ ಭಾರತ್ ರೈಲುಗಳ ಜನಪ್ರಿಯತೆ ನಿರಂತರವಾಗಿ ಹೆಚ್ಚುತ್ತಿದೆ ಮತ್ತು ಈಗಾಗಲೇ 1,11,00,000 ಪ್ರಯಾಣಿಕರು ಅದರಲ್ಲಿ ಪ್ರಯಾಣಿಸಿದ್ದಾರೆ. 25 ವಂದೇ ಭಾರತ್ ರೈಲುಗಳು ಓಡುತ್ತಿವೆ. ಈಗ ಮತ್ತೆ ಒಂಬತ್ತು ರೈಲುಗಳನ್ನು ಸೇರಿಸಲಾಗಿದೆ. ಈ ರೈಲುಗಳು ದೇಶದ ಎಲ್ಲಾ ಭಾಗಗಳಿಗೆ ಸಂಪರ್ಕ ಕಲ್ಪಿಸುವ ದಿನ ದೂರವಿಲ್ಲ ಎಂದು ಅವರು ಹೇಳಿದರು.
ಭಾರತೀಯ ರೈಲ್ವೆ ಭಾರತದ ಬಡ ಮತ್ತು ಮಧ್ಯಮ ವರ್ಗದ ಜನರ ಅತ್ಯಂತ ವಿಶ್ವಾಸಾರ್ಹ ಸಾರಿಗೆಯಾಗಿದೆ. ಭಾರತದ್ಲಿ ಒಂದೇ ದಿನದಲ್ಲಿ ರೈಲ್ವೆಯಲ್ಲಿ ಪ್ರಯಾಣಿಸುವವರ ಸಂಖ್ಯೆ ಅನೇಕ ದೇಶಗಳ ಜನಸಂಖ್ಯೆಗಿಂತ ಹೆಚ್ಚು ಇವೆ ಎಂದು ಅವರು ಹೇಳಿದ್ದಾರೆ.
ಭಾರತೀಯ ರೈಲ್ವೇಯನ್ನು ಆಧುನೀಕರಿಸಲು ಹೆಚ್ಚಿನ ಗಮನ ನೀಡದಿರುವುದು ದುರದೃಷ್ಟಕರ. ಆದರೆ ಈಗ ನಮ್ಮ ಸರ್ಕಾರವು ಭಾರತೀಯ ರೈಲ್ವೆಯ ಪರಿವರ್ತನೆಗಾಗಿ ಕೆಲಸ ಮಾಡುತ್ತಿದೆ. ನವ ಭಾರತದ ಸಾಧನೆಗಳ ಬಗ್ಗೆ ಎಲ್ಲಾ ಭಾರತೀಯರು ಹೆಮ್ಮೆಪಡುತ್ತಾರೆ. ಚಂದ್ರಯಾನ-3 ರ ಯಶಸ್ಸಿನಿಂದ ಸಾಮಾನ್ಯ ಜನರ ನಿರೀಕ್ಷೆಗಳು ಗಗನಕ್ಕೇರಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಜಿ 20 ಶೃಂಗಸಭೆಯ ಯಶಸ್ಸು ಭಾರತವು ಪ್ರಜಾಪ್ರಭುತ್ವ, ಜನಸಂಖ್ಯಾಶಾಸ್ತ್ರ ಮತ್ತು ವೈವಿಧ್ಯತೆಯ ಶಕ್ತಿಯನ್ನು ಹೊಂದಿದೆ ಎಂಬ ವಿಶ್ವಾಸವನ್ನು ನಮ್ಮ ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಜಗತ್ತು ಶ್ಲಾಘಿಸಿದೆ ಮತ್ತು ಈ ದೃಷ್ಟಿಯನ್ನು ಮುನ್ನಡೆಸಲು ಸರ್ಕಾರವು ನಾರಿ ಶಕ್ತಿ ವಂದನ್ ಅಧಿನಿಯಮ್ ಅನ್ನು ತಂದಿದೆ ಎಂದು ಅವರು ಹೇಳಿದರು.