ವಿದೇಶಗಳಲ್ಲಿ ಮದುವೆ ನಡೆಸದಂತೆ ಶ್ರೀಮಂತ ಕುಟುಂಬಗಳಿಗೆ ಆಗ್ರಹಿಸಿದ ಪ್ರಧಾನಿ ಮೋದಿ
Update: 2023-11-26 23:08 IST
Photo : ಮೋದಿ | PTI
ಹೊಸದಿಲ್ಲಿ: ತನ್ನ ʼಮನ್ ಕಿ ಬಾತ್ʼ ಕಾರ್ಯಕ್ರಮದಲ್ಲಿ ‘ವೋಕಲ್ ಫಾರ್ ಲೋಕಲ್’ಗೆ ಒತ್ತು ನೀಡಿದ ಪ್ರಧಾನಿ ನರೇಂದ್ರ ಮೋದಿಯವರು, ವಿದೇಶಗಳಲ್ಲಿ ಮದುವೆಗಳನ್ನು ಆಯೋಜಿಸದಂತೆ ಮತ್ತು ಅವುಗಳನ್ನು ದೇಶದಲ್ಲಿಯೇ ನಡೆಸುವಂತೆ ಶ್ರೀಮಂತ ಕುಟುಂಬಗಳನ್ನು ಆಗ್ರಹಿಸಿದರು.
ಮದುವೆ ಸಂದರ್ಭಗಳಲ್ಲಿ ಭಾರತದಲ್ಲಿ ತಯಾರಾದ ಉತ್ಪನ್ನಗಳನ್ನು ಮಾತ್ರ ಖರೀದಿಸುವಂತೆ ಜನರನ್ನು ಆಗ್ರಹಿಸಿದ ಅವರು, ಮದುವೆಯ ಸೀಝನ್ ಆರಂಭಗೊಂಡಿದೆ. ಈ ಸಂದರ್ಭದಲ್ಲಿ ಸುಮಾರು ಐದು ಲಕ್ಷ ಕೋಟಿ ರೂ.ಗಳ ವಹಿವಾಟು ನಡೆಯಬಹುದು ಎಂದು ಕೆಲವು ವ್ಯಾಪಾರ ಸಂಸ್ಥೆಗಳು ಅಂದಾಜಿಸಿವೆ. ಮದುವೆಗಾಗಿ ಖರೀದಿ ಮಾಡುವಾಗ ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು ಎಂದರು.
ಮದುವೆಗಳು ಭಾರತದಲ್ಲಿಯೇ ನಡೆದರೆ ಏನಾದರೂ ಸೇವೆಯನ್ನು ಒದಗಿಸುವ ಮೂಲಕ ಬಡವರಿಗೂ ನಾಲ್ಕು ಕಾಸು ಗಳಿಸುವ ಅವಕಾಶವಿರುತ್ತದೆ ಎಂದು ಮೋದಿ ಹೇಳಿದರು.