×
Ad

ಜೀವನ ಸಂಗಾತಿಯ ಆಯ್ಕೆಗೆ ಧರ್ಮ ಮತ್ತು ನಂಬಿಕೆಗಳು ಅಡ್ಡಿಯಾಗಬಾರದು: ದಿಲ್ಲಿ ಹೈಕೋರ್ಟ್

Update: 2023-09-18 22:30 IST

ಸಾಂದರ್ಭಿಕ ಚಿತ್ರ.| Photo: PTI

ಹೊಸದಿಲ್ಲಿ: ಜೀವನ ಸಂಗಾತಿಯನ್ನು ಆಯ್ದುಕೊಳ್ಳುವುದು ಪ್ರತಿಯೊಬ್ಬನ ಹಕ್ಕು. ಅದಕ್ಕೆ ಧರ್ಮ ಮತ್ತು ನಂಬಿಕೆಗಳು ಅಡ್ಡಿಯಾಗಬಾರದು ಎಂದು ದಿಲ್ಲಿ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ ಎಂದು Livelaw.in ವರದಿ ಮಾಡಿದೆ.

ಪರಸ್ಪರ ಸಮ್ಮತವಿರುವ ವಯಸ್ಕರಿಗೆ ತಮ್ಮ ಜೀವನ ಸಂಗಾತಿಯನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯವಿದೆ. ಅದನ್ನು ಯಾವುದೇ ವ್ಯಕ್ತಿಗಳು, ಸಮಾಜ ಅಥವಾ ಪೋಷಕರು ಮೊಟಕುಗೊಳಿಸುವ ಅಥವಾ ಸೀಮಿತಗೊಳಿಸುವ ಅಧಿಕಾರವಿಲ್ಲ ಎಂದು ನ್ಯಾ.ಸೌರಭ್ ಬ್ಯಾನರ್ಜಿ ಅಭಿಪ್ರಾಯ ಪಟ್ಟಿದ್ದಾರೆ.

ದಂಪತಿಗಳಿಬ್ಬರೂ ವಯಸ್ಕರಾಗಿದ್ದು, ಜುಲೈ 31ರಂದು ವಿಶೇಷ ವಿವಾಹ ಕಾಯ್ದೆ 1954ರ ಅನ್ವಯ ವಿವಾಹವಾಗಿದ್ದಾರೆ. ವಿವಾಹದ ಬಳಿಕ, ಪತ್ನಿಯ ಕುಟುಂಬದ ಸದಸ್ಯರು ನಿರಂತರವಾಗಿ ಬೆದರಿಸುತ್ತಿದ್ದಾರೆ ಎಂದು ದಂಪತಿಗಳಿಬ್ಬರು ಸಲ್ಲಿಸಿದ್ದ ಮನವಿಯನ್ನು ಆಧರಿಸಿ, ಅವರಿಗೆ ರಕ್ಷಣೆ ಒದಗಿಸಲು ನ್ಯಾಯಾಲಯವು ಸಮ್ಮತಿ ವ್ಯಕ್ತಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News