×
Ad

ವಿಧಾನಸಭಾ ಚುನಾವಣೆಗಳಲ್ಲಿ ಗೆದ್ದ 10 ಬಿಜೆಪಿ ಸಂಸದರ ರಾಜೀನಾಮೆ

Update: 2023-12-06 22:32 IST

Photo: PTI 

ಹೊಸದಿಲ್ಲಿ: ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮಾರ್ ಹಾಗೂ ಪ್ರಹ್ಲಾದ್ ಪಟೇಲ್ ಸೇರಿದಂತೆ ನವೆಂಬರ್ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿ, ವಿಜೇತರಾದ 12 ಮಂದಿ ಬಿಜೆಪಿ ಸಂಸದರ ಪೈಕಿ 10 ಮಂದಿ ಬುಧವಾರ ತಮ್ಮ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಈ ಸಚಿವರುಗಳು ಸಂಪುಟಕ್ಕೂ ರಾಜೀನಾಮೆ ನೀಡಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ. ಓರ್ವ ವ್ಯಕ್ತಿಯು ಲೋಕಸಭಾ ಸದಸ್ಯನಾಗಿ ಹಾಗೂ ರಾಜ್ಯ ವಿಧಾನಸಭಾ ಶಾಸಕನಾಗಿ ಕಾರ್ಯನಿರ್ವಹಿಸಲು ಸಂವಿಧಾನದಲ್ಲಿ ಅವಕಾಶವಿಲ್ಲದಿರುವುದರಿಂದ ಅವರು ರಾಜೀನಾಮೆ ನೀಡಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.

ರಾಜಸ್ತಾನದ ಅಲ್ವಾರ್‌ನಿಂದ ಆಯ್ಕೆಯಾದ ಬಾಬಾ ಬಾಲಕನಾಥ್ ಹಾಗೂ ಚತ್ತೀಸ್‌ಗಡದ ಸರ್ಗುಜಾದಿಂದ ಆಯ್ಕೆಯಾದ ರೇಣುಕಾ ಸಿಂಗ್ ಇನ್ನೂ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಲ್ಲ. ಆದರೆ ಅವರು ಶೀಘ್ರವೇ ರಾಜೀನಾಮೆ ಪತ್ರ ಸಲ್ಲಿಸುವ ನಿರೀಕ್ಷೆಯಿದೆ ಎಂದು ವರದಿಗಳು ತಿಳಸಿಇವೆ.

ಇಂದು ಲೋಕಸಭೆಗೆ ರಾಜೀನಾಮೆ ನೀಡಿದವರಲ್ಲಿ ಹಲವು ಮಂದಿ ಬಿಜೆಪಿ ನಾಯಕರುಗಳು ತಮ್ಮ ಪಕ್ಷ ಬಹುಮತ ಪಡೆದಿರುವ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಡ ರಾಜ್ಯಗಳ ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿದ್ದಾರೆನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News